ಇದು ಒಂದು ಉತ್ತಮ ಒಳ್ಳೆಯ ಭಾಷಣ, ಮಾಮೂಲಿ ಚರ್ವಿತ ಚರ್ವಣ ಇಲ್ಲ. ಸಮಕಾಲೀನ ದುರಂತಗಳ ಕಡೆ ಲಕ್ಷ್ಯ ಕೊಟ್ಟಿದ್ದು ಹಿಡಿಸಿತು. ಇದ್ದೀಯ ಭಾಷಣ ಅವರು ಬೆಳೆದು ಬಂದ ದಲಿತ ಬಂಡಾಯದ ಹಿನ್ನಲೆಯಲ್ಲಿ ಮೂಡಿ ಬಂದಿದ್ದು ಒಟ್ಟಾರೆಯಾಗಿ ಸಮಾಜಮುಖಿ ಚಿಂತನೆಯ ಮೈಗೂಡಿಸಿಕೊಂಡ ಪ್ರಗತಿಪರ ನಿಲುವು ತಾಳಿರುವ ಭಾಷಣ.

- ಚಂಪಾ

ಗೀತಾನಾಗಭೂಷಣರವರು ತಮ್ಮ ಭಾಷಣದಲ್ಲಿ ಕರ್ನಾಟಕದ ಮಟ್ಟಿಗೆ ಜ್ಞಾನಪೀಠ ಪ್ರಶಸ್ತಿಸರಿಸಮನಾದಂತಹ ಮತ್ತೊಂದು ಪ್ರಶಸ್ತಿಯನ್ನು ಸ್ಥಾಪಿಸಬೇಕೆಂದು ಸರ್ಕಾರವನ್ನು ಕೋರುವುದು ಹೊಸ ಪ್ರವೃತ್ತಿಯಾಗಿದೆ. ಮೊದಲಿಗೆ ಇದ್ದ ಪ್ರಶಸ್ತಿಗಳನ್ನು ಪಡೆಯಲು ಲಾಬಿ ನಡೆಯುತ್ತಿತ್ತು. ಈಗಿನ ಹೊಸ ಟ್ರೆಂಡ್, ಇದು. ಪ್ರಶಸ್ತಿಗಳನ್ನು ಸ್ಥಾಪಿಸಲು ಲಾಬಿ ಶುರುವಾಗಿದೆ. ಈಗ ಕೊಡಮಾಡುತ್ತಿರುವ ಅನೇಕ ಪ್ರಶಸ್ತಿಗಳೇ ಸಾಂಸ್ಕೃತಿಕ ಮೌಲ್ಯವಿಲ್ಲದಿರುವಾಗ ಹೊಸ ಪ್ರಶಸ್ತಿಗಳ ಸ್ಥಾಪನೆ ಅರ್ಥವಿಲ್ಲದ ತೋರಿಕೆಯಾದಿತು. ಗೀತಾ ನಾಗಭೂಷಣರವರು ವೇದಿಕೆಯ ಮೇಲೆ ಇದ್ದ ಸರ್ಕಾರದ ಏಕೈಕ ಪ್ರತಿನಿಧಿ ಶ್ರೀ ರಾಮುಲುರವರನ್ನು ಓಲೈಸುತ್ತಿದ್ದ ರೀತಿ ಹಿನ್ನೆಲೆಗು ವಯಸ್ಸಗಿದೆಯೆಂದು ನನ್ನ ನಂಬಿಕೆ.

- ರವೀಂದ್ರ ರೇಷ್ಮೆ


ಹಿಂದೆ- ನುಡಿದರೆ ಮುತ್ತಿನ ಹಾರದಂತಿರಬೇಕು, ಆದರೆ ಈಗ- ನುಡಿದರೆ ವಿಧಾನಸೌಧ ಗದಗದ ನಡಗು ವಂತಿರಬೇಕು.ಸರ್ವಾಧ್ಯಕ್ಷರ ಪ್ರಶಸ್ತಿಯ ಆಶಯವೇನೋ ಸರಿಯಿರಬಹುದು. ಆದರೆ, ಒಂದನ್ನು ಯೋಚನೆ ಮಾಡಬೇಕು. ನಡ ನೂರೆಂಟು ವನ್ತಿರಬೇಕು ಸರಮಾಲೆಯೇ ಇನ್ನು ಪ್ರಶಸ್ತಿಯ ವಿಷಯ ಅರ್ಹತೆಯನ್ನು, ಇನ್ನು ಪ್ರಶಸ್ತಿಯ ವಿಚಾರ. ಸಂಪಾದಿಸಿಕೊಳ್ಳೊ ನಿಟ್ಟಿನಲ್ಲಿ ದುಡಿಯೋದು ಮುಖ್ಯ. ಪ್ರಶಸ್ತಿಯ ಸೃಷ್ಟಿಯಲ್ಲ.

- ಹಂಪಾ ನಾಗರಾಜಯ್ಯ

ಇದು (ಗೀತಾ ನಾಗಭೂಷಣ ಅವರ ಅಧ್ಯಕ್ಷ ಭಾಷಣ) ಈ ವರೆಗೆ ನಾನು ಓದಿದ, ನಾನು ಕೇಳಿದ ಅಧ್ಯಕ್ಷ ಭಾಷಣಗಳ್ಲಿ ಉತ್ತಮವಾದದ್ದು. ಈ ಹಿಂದೆ ಬಸವರಾಜು ಅವರ ಭಾಷಣದಲ್ಲಿ ಸಿಟ್ಟು ಮಾತ್ರ ಇತ್ತು. ಇಲ್ಲಿ ಸಂಯಮವೂ ಇದೆ, ತಪ್ಪುಗಳನ್ನು ಗುರುತಿಸಿ ಹೇಳುವ ತಾಳ್ಮೆಯೂ ಇದೆ. ಇದು ತಾಯೊಯೊಬ್ಬಳಿಂದ ಮಾತ್ರ ಆಗಬಹುದಾದ ಕೆಲಸ. ಪ್ರಶಸ್ತಿಯ ಸ್ಥಾಪನೆಯಿಂದ ಕನ್ನಡ ಉದ್ಧಾರ ಆಗೋದಿಲ್ಲ.
ಬಿ. ಸುರೇಶ
ಪ್ರಶಸ್ತಿಗಳ ಸ್ಥಾಪನೆಯಿಂದ ಕನ್ನಡ ಖಂಡಿತಾ ಬೆಳೆಯೋಲ್ಲ. ಅದು ಮೂರರಲ್ಲಿ ಮತ್ತೊಂದು ಆಗುತ್ತದೆ ಅಷ್ಟೇ. ಮೊದಲು ಆಗಬೇಕಿರುವ ಕೆಲಸ ಕನ್ನಡ ಆಧುನಿಕ ತಂತ್ರಜ್ಞಾನವನ್ನು ಒಳಗೊಳ್ಳುವಂತೆ ಮಾಡುವುದು.
ಈಶ್ವರ್ ದೈತೋಟ