ಊಟ ತಯಾರಿದೆ









ಸಾಹಿತ್ಯ ಸಮ್ಮೇಳನದ ಮೇನ್ ಪ್ರೋಗ್ರಾಮ್ ಊಟಕ್ಕೆ ಭರ್ಜರಿ ತಯಾರಿ ನಡೆದಿದ! ಹೌದು ರೀ ಇದಾ ಮೇನ್ ಪ್ರೋಗ್ರಾಮ್ ಬಂದ ಜನ ತ್ರುಪ್ತರಾಗೋದು ಭೋಜನದಲ್ಲೇ, ಗದ್ದಳಗಲಾಗೋದು ಈ ರಸಗವಳ ಹೊಟ್ಟೆ ಸೇರದಿದ್ದಾಗಲೇ. ಊಟ ಏನೋ ಸಾಕಷ್ಟು ತಯಾರಾದ ಅದಾರೂ ಗದ್ದಲ ಆದರೆ ಅದು ಅದರ ವಿತರಣೆಯಲ್ಲೇ. ಗದಗಕ್ಕೆ ಬಂದವರೆಲ್ಲರಿಗೂ ಉತ್ತರ ಕರ್ನಾಟಕದ ಅಗ್ದೀ ಸ್ಪೆಷಲ್ ಊಟ ತಯಾರಿದೆ. ಮೆನು ಹೇಳಿದರೆನೆ ಬಾಯಲ್ಲಿ ನೀರೂರತ್ತದ! ಹಾಗಿದೆ ಮೆನು.....
ಗದುಗಿನ ಸುತ್ತಮುತ್ತಲ ಊರುಗಳ ರೈತರು ಗದುಗಿನ ಆತಿಥ್ಯಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ. ಸ್ವಯಂ ಪ್ರೇರಣೆಯಿಂದ ಖಡಕ್ ರೊಟ್ಟಿಗಳನ್ನು ತಂದು ಗದಗದ ಗೋದಾಮುಗಳಲ್ಲಿ ತುಂಬಿದ್ದಾರೆ. ಅಲ್ಲದೆ ನಾಲ್ಕು ಜನ ಗದುಗಿನ ಶಾಸಕರು ಒಬ್ಬೊಬ್ಬರು ೧ ಲಾಖ್ ರೊಟ್ಟಿಗಳನ್ನು ಮಾಡಿಸಿಟ್ಟಿದ್ದಾರೆ. ಇದಕ್ಕೆ ಕ್ವಿಂಟಾಲ್ ಗಟ್ಟಲೆ ಚಟ್ನಿಪುಡಿ ಕೂಡ ರೆಡಿ ಅದ. ಅದಕ್ಕೆ ತಕ್ಕಂತೆ ಬದನೇಕಾಯಿ ಪಲ್ಲೆ ಎಲ್ಲ ತಯಾರದ.
ಬರೀ ಖಾರ ಅಲ್ಲರೀ ಊಟದ ಮೆನುನಲ್ಲಿ ಸಿಹಿ ತಿಂಡಿಗಳ ಸವಾರಿಯೇ ನಡೆದಿದೆ. ಮುಖ್ಯವಾಗಿ ಗದುಗಿನ ವಿಶೇಷ ತಿನಿಸುಗಳು - ಶೇಂಗಾ ಒಬ್ಬಟ್ಟು ಮತ್ತು ಗೋಧಿ ಹುಗ್ಗಿ. ಇದಲ್ಲದೆ ಜಿಲೇಬಿ, ಮೈಸೂರ್ ಪಾಕ್, ಬಾದುಶ, ಶಿರಾ......

ಯುವ ಪ್ರತಿಭೆಗಳ ಕಲೋಪಾಸನೆ





ಗದುಗಿನ ಶಾಲಾ ವಿದ್ಯಾರ್ಥಿಗಳಿಂದ ಹಿಡಿದು ಪಡ್ಡೆ ಹುದುಗರವರೆಗೆ ಎಲ್ಲರೂ ತಮ್ಮ ಕೈಕುಂಚದಿಂದ ಅರಳಿಸಿದ ಕಲಾಕೃತಿಗಳಿವು.....ಈ ಮೂಲಕ ಸಮ್ಮೇಳನಕ್ಕೆ ಕುಂಚ ನಾಂದಿ .....

ಬ್ರೇಕಿಂಗ್ ನ್ಯೂಸ್ .....


ಗದುಗಿನ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡದ ಮುಖ್ಯಮಂತ್ರಿ ಶ್ರೀ. ಬಿ.ಎಸ. ಯೆಡಿಯೂರಪ್ಪನವರು ಗೈರು!
ಹೌದು ನಾಳೆಯ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯನ್ನು ನೆರವೇರಿಸಬೇಕಿದ್ದ ಯಡಿಯೂರಪ್ಪನವರು ತಮ್ಮ ಸಚಿವ ಗಣದೊಂದಿಗೆ ಇಂದೋರ್ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಹೋಗಿರುವುದರಿಂದ ಅವರ ಅನುಪಸ್ಥಿತಿ ಅನಿವಾರ್ಯವಂತೆ! ಅವರ ಜೊತೆ ಅನಂತಕುಮಾರ್ ಮತ್ತಿತರ ಪ್ರಮುಖ ಸಚಿವ ಮಹಾಶಯರೂ ಕೂಡ ಅಲ್ಲೇ ಠಿಕಾಣಿ ಹೂಡಿರುವುದರಿಂದ ಸಮ್ಮೇಳನ ಸಾಹಿತ್ಯಮಾಯವಾಗುವ ಸದಾವಕಾಶ ಮತ್ತು ಒಂದು ಕನಸನ್ನು ಬಿತ್ತಿದೆ.
ಸರ್ಕಾರದ ಪರವಾಗಿ ಜಿಲ್ಲಾ ಉಸ್ತುವಾರೀ ಸಚಿವ ಶ್ರೀರಾಮುಲು ಒಬ್ಬರೇಶ್ರೀರಾಮ!

ಹೇಳಿ ಇದಾರ ಕೆತ್ತನೆ?



ಒಬ್ಬ ಮನುಷ್ಯನ ಕೈ ಬರವಣಿಗೆಯನ್ನು ನೋಡಿ ಆತನ ವ್ಯಕ್ತಿತ್ವವನ್ನೇ ಹೇಳುತ್ತಾರಂತೆ. ಅದಕ್ಕೆ ಗ್ರಫಾಲಾಜಿ ಎಂದು ಹೆಸರು. ನೀವು ಅಷ್ಟೆಲ್ಲ ಮಾಡಬೇಕಾದ ಅಗತ್ಯವಿಲ್ಲ, ಈ ಕೈ ಬರೆವಣಿಗೆಯನ್ನು ನೋಡಿ ಇದರ ಕೆತ್ತನೆಯೆಂದು ಊಹಿಸಿದರೆ ಸಾಕು. ಇದು ಹೊಸ ಬಗೆಯ ಕ್ವಿಜ್ - ಹೇಳಿ ಇದಾರ ಕೆತ್ತನೆ?


ರೋಣ, ಗದಗ ಮತ್ತು ಸುತ್ತ ಮುತ್ತಲ ಅನೇಕ ಹಳ್ಳಿಗಳ ಜನ ಸ್ವಯಂ ಪ್ರೇರಿತರಾಗಿ ಮನೆ ಮನೆಗಳಿಂದ ಖಡಕ್ ರೊಟ್ಟಿಗಳನ್ನು ತಂದುಣಿಸುತ್ತಿದ್ದಾರೆ. ಗದಗದ ಆದರಾಥಿತ್ಯಕ್ಕೆ ನಾವಂತೂಚಿರಋಣಿ.

ಸಮ್ಮೇಳನದ ಪ್ರಧಾನ ವೇದಿಕೆಯ ಸಿಂಗಾರ ಬಂಗಾರ




ಪುಸ್ತಕ ಸಂತೆ





ಸಮ್ಮೇಳನದ ಪ್ರಮುಖ ಆಕರ್ಷಣೆ ಪುಸ್ತಕ ಸಂತೆಗೆ ಭರ್ಜರಿ ಸಿದ್ಧತೆ. ನಾಡಿನ ಬಹುತೇಕ ಎಲ್ಲ ಪ್ರಮುಖ ಪ್ರಕಾಶನದ ಅಮೂಲ್ಯ ಪುಸ್ತಕಗಳು ನೇರವಾಗಿ ಸಮ್ಮೇಳನದ ಪುಸ್ತಕ ಸಂತೆಯಲ್ಲಿ ಲಭ್ಯ. ಕನ್ನಡ ಜಾತ್ರೆಯೋಳಗೊಂದು ಪುಸ್ತಕ ಜಾತ್ರೆ !

ವ್ಯವಸ್ಥೆ - ಅವಸ್ಥೆ

ಸಾರ್ವಜನಿಕರಿಗಾಗಿ `ಮೂಲಭೂತ' ಸೌಲಭ್ಯ ಸಿದ್ಧ

ರಾಜ್ಯದ ನಾನಾ ಭಾಗಗಳಿಂದ ಹರಿದು ಬರುತ್ತಿರುವ ಜನಸ್ತೋಮಕ್ಕೆ ತೆರೆದಿರುವ ವಿಶೇಷ ನೋಂದಣಿ ವಿಭಾಗ

ಗದುಗಿನಲ್ಲಿ ಆಲೆಮನೆ


ಬೆಂಗಳೂರಿನಿಂದ ಗದಗಕ್ಕೆ ಆಲೆಮನೆ ತಂದ ಪ್ರಯಾಣ ಬೆಳಸಿದ ಪರಿಯಿದು, ಈಗ ಗದುಗಿನ ಗಡಿ ಮೆಟ್ಟಿ ನಿಂತು ವರದಿ ಮಾಡಲು ತಯಾರಾಗಿ ನಿಂತಿದೆ ನಮ್ಮ ಈ ಆಲೆಮನೆ ಇರುವೆಗಳಸಾಲು
Posted by Picasa

ಟೈಮ್ಸ್ ಆಫ್ ಇಂಡಿಯಾ ಇಂದು ಇ-ಲೋಕದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಮಾರ್ದಾನಿಯ ಕುರಿತು ಒಂದು ಸ್ಟೋರಿ ಮಾಡಿದ್ದು, ಅದರಲ್ಲಿ `ನುಡಿನಮನ' ಮೊದಲ ಸಾಲಲ್ಲಿರುವುದು ಸಂತಸದ ವಿಚಾರ