ಇಂದಿನ ಮಕ್ಕಳ ಸಾಹಿತ್ಯದ ನೆಲೆ-ಬೆಲೆಯ ಕುರಿತು ಸುಧೀರ್ಘವಾದ ವಿಚಾರವನ್ನು ಮಂಡಿಸಿದ ಕೃಷ್ಣಮೂರ್ತಿ ಬಿಳಿಗೆರೆಯವರು ಕನ್ನಡದ ಸದೃದಯಿಗಳನ್ನು ತಮ್ಮ ಮಾತುಗಳಿಂದ ಮಂತ್ರಮುಗ್ಧಗೊಳಿಸಿದರು. ಇಂದಿನ ಜ್ಞಾನಪೀಠ ಪ್ರಶಸ್ತಿ ವಿಜೇತರುಗಳೆಲ್ಲಾ ಮಕ್ಕಳ ಸಾಹಿತ್ಯವನ್ನು ಮರೆತು ಕುಳಿತಿರುವುದು ನಿಜಕ್ಕೂ ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು. ಇದಕ್ಕೆ ಅವರ ಮನ:ಸಾಕ್ಷಿ ಅಡ್ಡಿಬರುತ್ತಿದೆ ಎಂದು ಟೀಕಿಸಿದರು.