ಸಮ್ಮೇಳನಾಧ್ಯಕ್ಷರನ್ನು ಸಾರೋಟಿನ ಮೇಲೆ ಮೆರವಣಿಗೆಯಲ್ಲಿ ಕರೆತರುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ. ಅದು ಹಿರಿಯರ ಮೆರವಣಿಗೆ, ಅವರಿಗೆ ಸಲ್ಲಿಸುವ ಗೌರವ ಮತ್ತು ನಮ್ಮೆಲರ ಸಂಭ್ರಮಾಚರಣೆಯ ಒಂದು ಮಾರ್ಗ ಎಂಬುದು ಒಂದು ವಾದವಾದರೆ, ಇದು ನಮ್ಮಲ್ಲಿ ಅಳಿಯದೆ ಇನ್ನೂ ಉಳಿದಿರುವ ಫ್ಯೂಡಲ್ ಸಂಸ್ಕೃತಿಯ ದ್ಯೋತಕ ಎಂಬುದು ಮತ್ತೆ ಕೆಲವರ ವಿರೋಧ. ಈ ಬಾರಿಯ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ನಡೆದು ಕಣ್ಣಿಗೆ ಹಬ್ಬ ಎನಿಸಿದ್ದು ನಿಜವಾದರೂ, ಈ ಬಾರಿಯ ಮೆರವಣಿಗೆ ಕಟು ಟೀಕೆಗೆ ಒಳಗಾಗಿದ್ದೂ ಕೂಡ ಸುಳ್ಳಲ್ಲ. ಮುಖ್ಯವಾಗಿ ಈ ಬಾರಿಯ ಸಾರೋಟನ್ನು ಗೀತೋಪದೇಶದ ಮಾದರಿಯಲ್ಲಿ ನಿರ್ಮಿಸಿರುವುದು ಹಲವರನ್ನು ಕೆರಳಿಸಿದೆ. ಇದು ಪಾಂಡು ಕಡೆ ಸನಾತನ ಧರ್ಮದ ಹೇರಿಕೆಯಾದರೆ ಮತ್ತೊಂದು ಕಡೆ ಅಧಿಕಾರ ಪಕ್ಷದ ಒಡ್ಡೋಳಗವೆಂಬುದು ಹಲವರ ಅಂಬೋಣ.
ಹಿರಿಯ ಕವಿ ಎಚ್.ಎಸ್.ವಿ. ಅವರು ಇದಕ್ಕೊಂದು ಒಳ್ಳೆಯ ಸಲಹೆಯನ್ನೂ ಮುಂದಿಟ್ಟಿದ್ದಾರೆ. ಇನ್ನು ಮುಂದೆ ಈ ಮೆರವಣಿಗೆಯ ರಥದಲ್ಲಿ ದಸರೆಯ ಜಂಬೂ ಸವಾರಿಯಲ್ಲಿ ಮಾಡಿದಂತೆ ಕನ್ನಡಾಂಬೆಯನ್ನು ಇತ್ತು ಅಧ್ಯಕ್ಷರ ಕೈಲಿ ರಥವನ್ನು ಎಳೆಸಬೇಕು ಎಂಬುದು. ಇದು ಉತ್ತಮ ಸಲಹೆಯೇ. ಇಲ್ಲ ಕನ್ನಡಾಂಬೆಯೂ ಅಗತ್ಯ ಇಲ್ಲ. ಕನ್ನಡದ ಅತ್ಯುತ್ತಮ ಪುಸ್ತಕಗಳನ್ನಿತ್ತು ಮೆರವಣಿಗೆ ಮಾಡಿದರೂ ಸ್ಯೆ. ಪ್ರೊ.ಜಿ.ವಿ.ಯವರೂ ಇದನ್ನು ಒಪ್ಪಿ ಈ ಬಾರಿಯೇ ಅದನ್ನು ಕಾರ್ಯಾನುಸ್ಥನಗೊಳಿಸಲು ಬಯಸಿದ್ದರಾದರೂ ಕನ್ನಡ ತಾರ ಸ್ಥಾಯಿಯ ದನಿಗಳು ಅದನು ಆಗಗೊಡಿಸದೆ, ಇರುವುದು ವಿಷಾದವೇ ಸರಿ.