ಇವರ ಕಾದಂಬರಿಗಳಲ್ಲಿ ಅನೇಕ ರೀತಿಯ ಬಂಡಾಯಗಳ ಮಜಲುಗಳನ್ನು ಕಾಣಬಹುದು. ಕೆಲವೊಮ್ಮೆ, ಗಿತಕ್ಕರ ಕಾದಂಬರಿಗಳ ಪಾತ್ರಗಳು, ಸನ್ನಿವೇಶಗಳು ಒಂದು ಬಗೆಯ ಏಕತಾನತೆಯನ್ನು ನಿರ್ಮಿಸುತ್ತದೆ.
-(ಕಾದಂಬರಿಗಳ ಬಗೆಗೆ) ಡಾ.ಎಸ್.ಶಶಿರೇಖಾ
ವಿಡಂಬನೆಗೆ ಸರಿಹೊಂದುವಂತಿದೆ ಅವರ ರೇಡಿಯೋ ನಾಟಕಗಳು. ಜೋಗಿನಿ, ದುಮ್ಮಸ್ಸು, ಕಾಗೆ ಮುಟ್ಟಿದು, ಹೀಗೆ ಐದು ನಾಟಕಗಳು ಅತ್ಯುತ್ತಮವಾಗಿ ಮೂಡಿಬಂದಿವೆ. ಮಾನವೀಯ ನೆಲೆಗಟ್ಟುಗಳನ್ನು ಕಟ್ಟುಕೊಡುವ ವಾಸ್ತವವಾದಿ ಲೇಖಕರಲ್ಲಿ ಬಹಳ ಪ್ರಮುಖರಾಗಿ ಕಾಣುತ್ತಾರೆ.
-(ರೇಡಿಯೋ ನಾಟಕಗಳ ಬಗೆಗೆ) ಶಿವಾನಂದ ಕೆಳಗಿನಮನಿ.
ಪ್ರಪಂಚದಲ್ಲಿ ಮಹಿಳೆಯೇ ಪ್ರಥಮ ದಲಿತವರ್ಗ. ಗಿತಕ್ಕ ಅವರು ಶೂನ್ಯದಿಂದ ಶಿಖರದವರೆಗೆ ಬೆಳೆದ ಸಾಹಿತಿ ಎನ್ನಬಹುದು. ಕೆಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದು ಕೊಟ್ಟ ಪ್ರಥಮ ಕನ್ನಡ ಮಹಿಳಾ ಸಾಹಿತಿ. ತರಾಸು, ಎಂ.ಕೆ.ಇಂದಿರಾರವರನ್ನು ಓದಿಕೊಳ್ಳುತ್ತಾ ಬೆಳೆದ ಇವರು ತಮ್ಮ ಸುತ್ತಲಿನ ಪರಿಸರದ ಸ್ಥಿತಿಗೆ ಬೇಸೆತ್ತು ಕಂಬಾರ, ಲಂಕೇಶರ ಬರಹಕ್ಕೆ ಮನಸೋತು ಹೊಸ ರೀತಿಯ ಬರವಣಿಗೆಯನ್ನು ಆರಂಭಿಸಿದರು. ಗಂಡಸರನ್ನು ಮೀರಿಸುವ ಗಡಸುತನ ಇವರ ಸಾಹಿತ್ಯದಲ್ಲಿದೆ.
-ಕಾಶಿನಾಥ್ ಅಂಬಲಗಿ.