ಇಂದಿನ ಸಮ್ಮೇಳನದಲ್ಲಿ ...ದಿಂದ ವಿಶಿಷ್ಟ ರೀತಿಯ ಪ್ರತಿಭಟನೆ......!

ನೂರೆಂಟು ನಿರ್ಣಯಗಳ ಬಾಲ ಈಗಾಗಲೇ ಗಡಿದಾಟಿ ಹೋಗಿದೆ. ಆದರೆ ಅವುಗಳಲ್ಲಿ ಅನುಷ್ಟಾನವಾದದ್ದು ಎಷ್ಟು? ಇಂತಹ ಸಂದರ್ಭದಲ್ಲಿ ಒಂದು ಸಮ್ಮೇಳನದಲ್ಲಿ ಎರಡರಿಂದ ಮೂರು ನಿರ್ಣಯ ತೆಗೆದುಕೊಳ್ಳುವುದು ಒಳ್ಳೆಯದು ಅನ್ನುವುದು ಹೊಸ ಚರ್ಚೆ.

ಇವೆಲ್ಲವನ್ನೂ ದಾಟಿ ಒಂದು ಹೆಜ್ಜೆ ಮುಂದಿಟ್ಟು ಡಾ. ನಲ್ಲೂರ್ ಪ್ರಸಾದ್ ರವರು ಸಮ್ಮೇಳನದಲ್ಲಿ ಹಿಂದಿನ ನಿರ್ಣಯಗಳೆಲ್ಲ ಜಾರಿಗೆ ಬರಬೇಕೆಂದು ಸರಕಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಪ್ರತಿಭಟನಾತ್ಮಕವಾಗಿ ಯಾವುದೇ ಹೊಸ ನಿರ್ಣಯಗಳನ್ನು ಮಂಡಿಸುತ್ತಿಲ್ಲವೆಂಬುದು ನಿಜವಾಗಿಯೂ ಚೇತೋಹಾರಿ ಬೆಳವಣಿಗೆಯಾಗಿದೆ.