ಎಲ್ಲರೂ ಮನೆಗಳಲ್ಲಿ ಲಕ್ಷ್ಮಿಯನ್ನು ಪೂಜಿಸುತ್ತಾರೆ, ಸರಸ್ವತಿಯನ್ನು ವಿಷೇಶವಾಗಿ ಪೂಜಿಸುವುದಿಲ್ಲ. ಎಲ್ಲರ ಮನೆಗಳಲ್ಲು ದೇವರ ಪೂಜೆಗಾಗಿ ಪ್ರತ್ಯೇಕ ಕೋಣೆ ಇರುತ್ತದೆ. ಅದೇ ರೀತಿ ಪುಸ್ತಕಗಳಿಗಾಗಿ ಒಂದು ಕೋಣೆಯನ್ನು ನಿರ್ಮಿಸಬೇಕು. ಓದುವ ಸುಖದಿಂದ ವಂಚಿತರಾದವರು ನತದೃಷ್ಟರು. ಜೀವನದ ದೃಷ್ಟಿಯನ್ನು ಬದಲಾಯಿಸುವ ಶಕ್ತಿ ಪುಸ್ತಕಕ್ಕಿದೆ.
-ಸಿದ್ದಲಿಂಗಯ್ಯ.