ಯಾರೋ ಬರೆದು ಕೊಟ್ಟರು- ಇವರು ಓದಿದರು.
ಯಾವುದೇ ಹೊಸತನವಿಲ್ಲದ ಯಡಿಯೂರಪ್ಪನವರ ಭಾಷಣ.
ಈ ಹಿಂದೆ ತೆಗೆದುಕೊಂಡ ಎಲ್ಲಾ ನಿರ್ಣಯಗಳ ಅನುಷ್ಟಾನವೇ ನಮ್ಮ ನಿರ್ಣಯವೆಂದು ಘೋಷಿಸಿದ ಮೇಲೆ ಎಲ್ಲರೂ ಅದರ ಕುರಿತು ಮರೆತೇ ಹೋದರು. ಕನ್ನಡದ ಮುಖ್ಯಮಂತ್ರಿ ಎಂದು ಪರಾಕು ಹೇಳಿಸಿಕೊಂಡ ಮಿ.ಯೆಡ್ಡಿ ಕನ್ನಡದ ಯಾವುದೇ ಸಮಸ್ಯೆ ತಲ್ಲಣಗಳಿಗೆ ಧ್ವನಿಯಾಗದೇ ಹೋದದ್ದು ವಿಪರ್ಯಾಸವೇ ಸರಿ.


ಇನ್ನು ಒಂದು ಸಂಪ್ರದಾಯದಂತೆ ಎರಡು ಹೊಸ ಯ್ಳೋಜನೆಗಳನ್ನು ಘೋಷಿಸಿದರು-
ಸಮ್ಮೇಳನದ ನೆನಪಿಗೆ ೫ ಕೋಟಿ ಬಿಡುಗಡೆಯ ಭರವಸೆ


ಪ್ರಥಮ ಪ್ರಕಾಶನಕ್ಕೆ ಸಬ್ಸಿಡಿ- ಕಸಾಪ ಮೂಲಕ ೧೦ ಕೋಟಿ
ಬೆಂಗಳೂರಿನಲ್ಲಿ ಭುವನೇಶ್ವರಿ ವಿಗ್ರಹ
ಅಮೇರಿಕಾದ ಲಿಬರ್ಟಿ ಸ್ಟ್ಯಾಚೂ ಹಾಗು ಥೈಲ್ಯಾಂಡಿನ ಬುದ್ಧನ ವಿಗ್ರಹದ ಮಾದರಿ.
ಇದರಲ್ಲಿ ಪುಸ್ತಕ ಪ್ರಕಾಶನದ್ದು ಒಳ್ಳೆಯ ಯೋಜನೆಯೇ, ಆದರೆ ಕನ್ನಡಮ್ಮನ ಪ್ರತಿಮೆ, ಸಮ್ಮೇಳನ ಭವನ, ಇವೆರಡೂ ತೋರಿಕೆಯ ಕನ್ನಡವಷ್ಟೇ ಆದೀತು. ಇದರ ಬದಲು ರಚನಾತ್ಮಕವಾದ ಯೋಜನೆಗಳನ್ನು ಹಾಕಿಕೊಂಡಿದ್ದರೆ ಎಷ್ಟೋ ಚೆನ್ನಿತ್ತು.