ನಮ್ಮ ನಿಮ್ಮೆಲ್ಲರ ಪ್ರೀತಿಯ ಚಂಪಾ ಅವರಿಗೆ ಇಂದು ಎಪ್ಪತ್ತು ತುಂಬಿದ ಸಂಭ್ರಮ, ಅವರಿಗೂ ನಮಗೂ...ಎಪ್ಪತ್ತರ ಮಾಗಿದ ವಯಸ್ಸಿನಲ್ಲೂ ಅವರ ಉತ್ಸಾಹ, ಬರಹದ ಮೊನಚು ಇನ್ನೂ ಎಳ್ಳಷ್ಟೂ ಇಳಿದಿಲ್ಲ, ಹಾಗೆಯೇ ಅವರ ಕನ್ನಡದ ಪರ ಕಾಳಜಿಯೂ ಅಷ್ಟೇ. ವರ್ತಮಾನದಲ್ಲಿ ಕನ್ನಡದ ಚಳುವಳಿ ಹಳಿ ತಪ್ಪುತ್ತಿರುವ ಇಂದು, ಚಂಪಾರಂತಹ ಮಾಗಿದ ಹಿರಿಯರ ಮಾರ್ಗದರ್ಶನ ಅದಕ್ಕೆ ಬೇಕು. ಅದಕ್ಕವರು ಸದಾ ತಯಾರು.

ಇಂತಿಪ್ಪ ಕನ್ನಡದ ಹಿರಿಯ ಕ್ರಿಯಾಶೀಲ ಮನಸ್ಸು ಚಂಪಾರವರ ೭೦ರ ಸಂಭ್ರಮದಲ್ಲಿ ನಾವೂ ಭಾಗಿಯಾಗಲು ಸಂತೋಷವಾಗುತ್ತಿದೆ. ಇನ್ನೂ ಒಂದು ಲೇಖನ ಬರೆದರೆ ಅದರಾಗೆ ಎಷ್ಟು `ಹೆಣಗಳುರುಳಿದಾವು' ಎಂದು ಎಣಿಸುವಷ್ಟು ಜೀವನೋತ್ಸಾಹವಿರುವ, ನಮ್ಮ ಆಲೆಮನೆ ಬಳಗದ ಹಿತೈಷಿಗಳೂ, ಆಪ್ತರೂ ಆದ ಚಂಪಾರವರು, ಇನ್ನೂ ನೂರ್ಕಾಲ ಬಾಳಲಿ ಎಂಬುದು ನಮ್ಮೆಲ್ಲರ ಪ್ರೀತಿಯ ಹಾರೈಕೆ....
..