ಹೇಳಿ ಇದಾರ ಕೆತ್ತನೆ?


ಗೀತ ನಾಗಭೂಷಣರ ಭಾಷಣ, ಪೀಠ ಸಲಹೆಗೆ ಕೆಲವು ಪ್ರತಿಕ್ರಿಯೆಗಳು.

ಇದು ಒಂದು ಉತ್ತಮ ಒಳ್ಳೆಯ ಭಾಷಣ, ಮಾಮೂಲಿ ಚರ್ವಿತ ಚರ್ವಣ ಇಲ್ಲ. ಸಮಕಾಲೀನ ದುರಂತಗಳ ಕಡೆ ಲಕ್ಷ್ಯ ಕೊಟ್ಟಿದ್ದು ಹಿಡಿಸಿತು. ಇದ್ದೀಯ ಭಾಷಣ ಅವರು ಬೆಳೆದು ಬಂದ ದಲಿತ ಬಂಡಾಯದ ಹಿನ್ನಲೆಯಲ್ಲಿ ಮೂಡಿ ಬಂದಿದ್ದು ಒಟ್ಟಾರೆಯಾಗಿ ಸಮಾಜಮುಖಿ ಚಿಂತನೆಯ ಮೈಗೂಡಿಸಿಕೊಂಡ ಪ್ರಗತಿಪರ ನಿಲುವು ತಾಳಿರುವ ಭಾಷಣ.

- ಚಂಪಾ

ಗೀತಾನಾಗಭೂಷಣರವರು ತಮ್ಮ ಭಾಷಣದಲ್ಲಿ ಕರ್ನಾಟಕದ ಮಟ್ಟಿಗೆ ಜ್ಞಾನಪೀಠ ಪ್ರಶಸ್ತಿಸರಿಸಮನಾದಂತಹ ಮತ್ತೊಂದು ಪ್ರಶಸ್ತಿಯನ್ನು ಸ್ಥಾಪಿಸಬೇಕೆಂದು ಸರ್ಕಾರವನ್ನು ಕೋರುವುದು ಹೊಸ ಪ್ರವೃತ್ತಿಯಾಗಿದೆ. ಮೊದಲಿಗೆ ಇದ್ದ ಪ್ರಶಸ್ತಿಗಳನ್ನು ಪಡೆಯಲು ಲಾಬಿ ನಡೆಯುತ್ತಿತ್ತು. ಈಗಿನ ಹೊಸ ಟ್ರೆಂಡ್, ಇದು. ಪ್ರಶಸ್ತಿಗಳನ್ನು ಸ್ಥಾಪಿಸಲು ಲಾಬಿ ಶುರುವಾಗಿದೆ. ಈಗ ಕೊಡಮಾಡುತ್ತಿರುವ ಅನೇಕ ಪ್ರಶಸ್ತಿಗಳೇ ಸಾಂಸ್ಕೃತಿಕ ಮೌಲ್ಯವಿಲ್ಲದಿರುವಾಗ ಹೊಸ ಪ್ರಶಸ್ತಿಗಳ ಸ್ಥಾಪನೆ ಅರ್ಥವಿಲ್ಲದ ತೋರಿಕೆಯಾದಿತು. ಗೀತಾ ನಾಗಭೂಷಣರವರು ವೇದಿಕೆಯ ಮೇಲೆ ಇದ್ದ ಸರ್ಕಾರದ ಏಕೈಕ ಪ್ರತಿನಿಧಿ ಶ್ರೀ ರಾಮುಲುರವರನ್ನು ಓಲೈಸುತ್ತಿದ್ದ ರೀತಿ ಹಿನ್ನೆಲೆಗು ವಯಸ್ಸಗಿದೆಯೆಂದು ನನ್ನ ನಂಬಿಕೆ.

- ರವೀಂದ್ರ ರೇಷ್ಮೆ


ಹಿಂದೆ- ನುಡಿದರೆ ಮುತ್ತಿನ ಹಾರದಂತಿರಬೇಕು, ಆದರೆ ಈಗ- ನುಡಿದರೆ ವಿಧಾನಸೌಧ ಗದಗದ ನಡಗು ವಂತಿರಬೇಕು.ಸರ್ವಾಧ್ಯಕ್ಷರ ಪ್ರಶಸ್ತಿಯ ಆಶಯವೇನೋ ಸರಿಯಿರಬಹುದು. ಆದರೆ, ಒಂದನ್ನು ಯೋಚನೆ ಮಾಡಬೇಕು. ನಡ ನೂರೆಂಟು ವನ್ತಿರಬೇಕು ಸರಮಾಲೆಯೇ ಇನ್ನು ಪ್ರಶಸ್ತಿಯ ವಿಷಯ ಅರ್ಹತೆಯನ್ನು, ಇನ್ನು ಪ್ರಶಸ್ತಿಯ ವಿಚಾರ. ಸಂಪಾದಿಸಿಕೊಳ್ಳೊ ನಿಟ್ಟಿನಲ್ಲಿ ದುಡಿಯೋದು ಮುಖ್ಯ. ಪ್ರಶಸ್ತಿಯ ಸೃಷ್ಟಿಯಲ್ಲ.

- ಹಂಪಾ ನಾಗರಾಜಯ್ಯ

ಇದು (ಗೀತಾ ನಾಗಭೂಷಣ ಅವರ ಅಧ್ಯಕ್ಷ ಭಾಷಣ) ಈ ವರೆಗೆ ನಾನು ಓದಿದ, ನಾನು ಕೇಳಿದ ಅಧ್ಯಕ್ಷ ಭಾಷಣಗಳ್ಲಿ ಉತ್ತಮವಾದದ್ದು. ಈ ಹಿಂದೆ ಬಸವರಾಜು ಅವರ ಭಾಷಣದಲ್ಲಿ ಸಿಟ್ಟು ಮಾತ್ರ ಇತ್ತು. ಇಲ್ಲಿ ಸಂಯಮವೂ ಇದೆ, ತಪ್ಪುಗಳನ್ನು ಗುರುತಿಸಿ ಹೇಳುವ ತಾಳ್ಮೆಯೂ ಇದೆ. ಇದು ತಾಯೊಯೊಬ್ಬಳಿಂದ ಮಾತ್ರ ಆಗಬಹುದಾದ ಕೆಲಸ. ಪ್ರಶಸ್ತಿಯ ಸ್ಥಾಪನೆಯಿಂದ ಕನ್ನಡ ಉದ್ಧಾರ ಆಗೋದಿಲ್ಲ.
ಬಿ. ಸುರೇಶ
ಪ್ರಶಸ್ತಿಗಳ ಸ್ಥಾಪನೆಯಿಂದ ಕನ್ನಡ ಖಂಡಿತಾ ಬೆಳೆಯೋಲ್ಲ. ಅದು ಮೂರರಲ್ಲಿ ಮತ್ತೊಂದು ಆಗುತ್ತದೆ ಅಷ್ಟೇ. ಮೊದಲು ಆಗಬೇಕಿರುವ ಕೆಲಸ ಕನ್ನಡ ಆಧುನಿಕ ತಂತ್ರಜ್ಞಾನವನ್ನು ಒಳಗೊಳ್ಳುವಂತೆ ಮಾಡುವುದು.
ಈಶ್ವರ್ ದೈತೋಟ


ಇವತ್ತು ಮುಗೀತ್ ನಾಳೆಗೆ ರೆಡಿ








Posted by Picasa

ಕರ್ನಾಟಕಕ್ಕೇ ಒಂದು ಪೀಠ.....!


ಭಾರತದ ಮಟ್ಟದಲ್ಲಿ ಜ್ಞಾನಪೀಠ, ಕರ್ನಾಟಕದ ಮಟ್ಟದಲ್ಲಿ .....?
ಈ ಕೊರತೆಯನ್ನು ಗೀತಾ ನಾಗಭೂಷಣರವರು ಗುರುತಿಸಿದ್ದಾರೆ. ಅವರು ತಮ್ಮ ಅಧ್ಯಕ್ಷೀಯ ಭಾಷಣದ ನಡುವೆ ಕರ್ನಾಟಕದ ಮಟ್ಟದಲ್ಲಿ ಸಾಹಿತ್ಯಕ್ಕೆಂದು ಜ್ನಾನಪೀಥದಂತಹ ಅತ್ಯುನ್ನತ ಪ್ರಶಸ್ತಿಯೊಂದನ್ನು ಸ್ಥಾಪಿಸಬೇಕಿರುವುದು ತುರ್ತಿನ ಅಗತ್ಯವೆಂದರಲ್ಲದೆ, ಈ ವಿಷಯವಾಗಿ ವೇದಿಕೆಯ ಮೇಲಿದ್ದ ಸರ್ಕಾರದ ಏಕೈಕ ಪ್ರತಿನಿಧಿ ಶ್ರೀ ರಾಮುಲುರವರನ್ನು ತಮ್ಮನೆಂದು ಕರೆದು, ಈ ವಿಚಾರವಾಗಿ ಅವರು ಈ ಕೂಡಲೇ ಗಮನ ಹರಿಸಬೇಕೆಂದು, ಅದಕ್ಕೆ ಅವರ ಒಂದು ದಿನದ ಸಂಪಾದನೆಯೇ ಭರ್ಜರಿ ಮೊತ್ತವಾದೀತು, ಎಂದು ಹೇಳಿ ಅಚ್ಚರಿಪದಿಸಿದರು.

ಸಮ್ಮೇಳನದಲ್ಲೊಂದು ಸಣ್ಣ ಸಂತೆ.















Posted by Picasa

ಗದಗದ ಸಮ್ಮೇಳನ್ನದಲ್ಲಿ ಜನಸ್ತೋಮ







Posted by Picasa

ಗದಗದ ಬೇಸಿಗೆಯಲ್ಲಿ ನೀರಿಗಾಗಿ ಪರದಾಟ



Posted by Picasa

ಪ್ರಕಾಶ್ ಶೆಟ್ಟಿ ಪಂಚ್!

Posted by Picasa

ಗದಗ ಬಜಾರ್! ಜನರೆಲ್ಲಾ ಶಾಪಿಂಗ್ನಲ್ಲಿ ಬ್ಯುಸಿ !










Posted by Picasa

ಮಾಧ್ಯಮದವರಿಗೆ ಊಟ ವಿಶೇಷ!



Posted by Picasa

ಗೀತಕ್ಕ ವಿವಿಧ ಭಾವ ಭಂಗಿಗಳಲಿ.....




Posted by Picasa

ಇದಾರ ಕೆತ್ತನೆ - ಉತ್ತರ


ಇದಾರ ಕೆತ್ತನೆ ಅಂತ ಕೇಳಿದ್ದಿವಿ. ಸರಿ ಉತ್ತರ ಕೊಟ್ಟವರು ಒಬ್ಬರೇ ಸಂದೀಪ್ ಕಾಮತ್. ಈ ಕುಶಲ ಅರ್ಥಪೂರ್ಣ ಕೆತ್ತನೆ ಖಂಡಿತವಾಗಿಯೂ ಜೋಗಿಯವರದು!

ಅಧ್ಯಕ್ಷರ ಭಾಷಣದಲ್ಲಿ ಬ್ಲಾಗುಗಳ ಪ್ರಸ್ತಾಪ - ಅವಧಿಗೆ ಪ್ರಶಂಸೆ

ಇತ್ತೀಚೆಗೆ ಕೆಲವರು ಕ್ಲುಪ್ತವಾದ, ಸಾಂದ್ರತೆಯುಳ್ಳ ಬರವಣಿಗೆಯತ್ತ ಧಾವಿಸುತ್ತಿದ್ದಾರೆ. ಬ್ಲಾಗು ಅಂಥದೊಂದು ತೀವ್ರವಾದ ಬರಹರೂಪವೇನೋ ಕಾದುನೋಡಬೇಕಿದೆ. ಹೀಗೆಂದಾಗ ಕನ್ನಡದ ಪ್ರತಿಭಾಲೋಕ ಸ್ಥಗಿತವಾಗಿದೆ ಅಥವಾ ಮಂದವಾಗಿದೆ ಎಂತೆನೂ ಅಲ್ಲ. ಹಾಗೆ ನೋಡಿದರೆ ಇದು ''ಬ್ಲಾಗು''ಗಳ ಯುಗ. ಕೆಂಡ ಸಂಪಿಗೆ, ಅವಧಿ, ಪುಸ್ತಕಪ್ರೀತಿ, ಅಂತರಂಗ, ಬುಕ್ಮಾರ್ಕ್. ಅನುಭವ ಮಂಟಪ, ಅನವರತ, ಮತ್ತು ಅಭಿವ್ಯಕ್ತಿ ಬ್ಲಾಗುಗಳು ವಿವಿಧ ವೆಬ್ ಸೈಟ್ ಗಳಲ್ಲಿ ಬರುತ್ತಿರುವ ಬರಹಗಳ ಮೊನಚು, ಆಪ್ತತೆ ಎಂಥವರನ್ನೂ ದಮ್ಗುಬದಿಸದೆ ಇರಲಾರದು. ದಿನದ ಹೆಚ್ಚುಹೊತ್ತು ಕಂಪ್ಯೂಟರ್ ಇದಿರು ಕುಳಿತು ಎಲ್ಲದಕ್ಕೂ ಅದನ್ನೇ ಆಶ್ರಯಿಸಿಕೊಂಡಿರುವ ಹೈಟೆಕ್ ಸಿಟಿಗಳ ವಿದ್ಯಾವಂತರಿಗಂತೂ ಬ್ಲಾಗುಗಳ ಲೋಕ ತೀರ ಆಪ್ಯಾಯಮಾನವೆನಿಸುತ್ತಿದೆ. ಖಾಸಗಿಯಲ್ಲದ ಈ ಖಾಸಗಿ ಓದು ಸಾಫ್ಟ್ವೇರ್ ಜಗತ್ತಿಗೆ ಅನಿವಾರ್ಯ.

ಸ್ಟೇಜ್ ಮ್ಯಾಗೆ ಕೆಳಗೆ ಕೆಲವು ಅಪುರೂಪದ ಭಾವಭಂಗಿಗಳು




Posted by Picasa

ಸಮ್ಮೇಳನದ ಕೆಲವು ಸೈಡ್ ಲೈಟ್ಸ್




Posted by Picasa

ಸಮ್ಮೇಳನಾಧ್ಯಕ್ಷರ ಭಾಷಣ




ಸಮ್ಮೇಳನಾಧ್ಯಕ್ಷರ
ಭಾಷಣದ ಪೂರ್ಣ ಪಾಠ.

ಗೀತಕ್ಕ ತಮ್ಮ ಭಾಷಣದಲ್ಲಿ ಬ್ಲಾಗುಗಳ ಬಗ್ಗೆ ಕೂಡ ಮಾತನಾಡಿದ್ದಾರೆ, ಅವಧಿಯ ಪ್ರಸ್ತಾಪವೂ ಆಗಿದೆ. ಏನೆಂಬ ಕುತೂಹಲವೇ....ಇಲ್ಲಿ ಕ್ಲಿಕ್ಕಿಸಿ