ತಾಜಾ ತಾಜಾ ಕಡಲೆಕಾಯ್.....
12:21 PM
Posted by ಆಲೆಮನೆ
ಇಂದಿನ ಸಮ್ಮೇಳನದಲ್ಲಿ ಕ.ಸ.ಪ.ದಿಂದ ವಿಶಿಷ್ಟ ರೀತಿಯ ಪ್ರತಿಭಟನೆ......!
ನೂರೆಂಟು ನಿರ್ಣಯಗಳ ಬಾಲ ಈಗಾಗಲೇ ಗಡಿದಾಟಿ ಹೋಗಿದೆ. ಆದರೆ ಅವುಗಳಲ್ಲಿ ಅನುಷ್ಟಾನವಾದದ್ದು ಎಷ್ಟು? ಇಂತಹ ಸಂದರ್ಭದಲ್ಲಿ ಒಂದು ಸಮ್ಮೇಳನದಲ್ಲಿ ಎರಡರಿಂದ ಮೂರು ನಿರ್ಣಯ ತೆಗೆದುಕೊಳ್ಳುವುದು ಒಳ್ಳೆಯದು ಅನ್ನುವುದು ಹೊಸ ಚರ್ಚೆ.
ಇವೆಲ್ಲವನ್ನೂ ದಾಟಿ ಒಂದು ಹೆಜ್ಜೆ ಮುಂದಿಟ್ಟು ಡಾ. ನಲ್ಲೂರ್ ಪ್ರಸಾದ್ ರವರು ಈ ಸಮ್ಮೇಳನದಲ್ಲಿ ಹಿಂದಿನ ನಿರ್ಣಯಗಳೆಲ್ಲ ಜಾರಿಗೆ ಬರಬೇಕೆಂದು ಸರಕಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಪ್ರತಿಭಟನಾತ್ಮಕವಾಗಿ ಯಾವುದೇ ಹೊಸ ನಿರ್ಣಯಗಳನ್ನು ಮಂಡಿಸುತ್ತಿಲ್ಲವೆಂಬುದು ನಿಜವಾಗಿಯೂ ಚೇತೋಹಾರಿ ಬೆಳವಣಿಗೆಯಾಗಿದೆ.
ನಮ್ಮ ಬೆಂಗಳೂರಿನಲ್ಲಿ ಮುಂದಿನ ಸಾಹಿತ್ಯ ಹಬ್ಬ!
10:18 AM
Posted by ಆಲೆಮನೆ
೨೦೧೦ರ ಸಾಲಿನ ೭೭ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮ ಬೆಂಗಳೂರಿನಲ್ಲಿ! ಬಳ್ಳಾರಿ ಹಾವೇರಿಗಳನ್ನೂ ಹಿಂದಿಕ್ಕಿ ನಮ್ಮ ಬೆಂಗಳೂರು, ಮುಂಬರುವ ಸಾಹಿತ್ಯ ಸಮ್ಮೇಳನದ ಆತಿಥ್ಯದ ಜವಾಬ್ದಾರಿಯನ್ನು ಸ್ವೀಕರಿಸಿದೆ. ಬೆಂಗಳೂರಿನ ಸಾಹಿತ್ಯಾಭಿಮಾನಿಗಳೆಲ್ಲ ತಯಾರಾಗಬೇಕಿನ್ನು.....
ಬ್ರೇಕಿಂಗ್ ನ್ಯೂಸ್ .....ಮುಂದಿನ ಸಮ್ಮೇಳನ ಎಲ್ಲಿ?
7:28 PM
Posted by ಆಲೆಮನೆ
ಎಲ್ಲರ ಕುತೂಹಲಕ್ಕೆ ಕಾರಣವಾಗಿರುವ ಮುಂದಿನ ಸಮ್ಮೇಳನ ಎಲ್ಲಿ ಎಂಬ ವಿಚಾರ ಇನೂ ಸಸ್ಪೆನ್ಸ್! ಆದರೆ ನುಡಿನಮನ ನಿಮಗೆ ಸ್ಕೂಪ್ನಂತಹ ಮಾಹಿತಿಯನ್ನು ಹೊತ್ತು ತಂದಿದೆ.
ಮುಂದಿನ ಸಮ್ಮೇಳನಕ್ಕೆ ಚರ್ಚೆಯಲ್ಲಿರುವ ಸ್ಥಳಗಳು - ಬಿಜಾಪುರ, ಬಳ್ಳಾರಿ, ಹಾವೇರಿ ಮತ್ತು ಬೆಂಗಳೂರು!
ಬಳ್ಳಾರಿಯಲ್ಲಿ ಈ ಹಿಂದೆ ೩ ಬಾರಿ ೧೯೨೬, ೧೯೩೮, ೧೯೫೮ ರಲ್ಲಿ ಸಮ್ಮೇಳನ ನಡೆಡಿದ್ದು ಬಿಜಾಪುರದಲ್ಲಿ ೧೯೨೩ರಲ್ಲಿ ಒಮ್ಮೆ ಮಾತ್ರ ಸಮ್ಮೇಳನ ನಡೆದಿದೆ. ಇನ್ನು ಬೆಂಗಳೂರಿನಲ್ಲಿ ಕಸಾಪ ಸ್ಥಾಪನೆಯಾದ ಮೊದಲೆರಡು ವರ್ಷಗಳ - ೧೯೧೫, ೧೯೧೬ರಲ್ಲಿ ಸಮ್ಮೇಳನಗಳು ನಡೆದಿದ್ದು, ನಂತರ ೧೯೭೦ರಲ್ಲಿ ದೇಜಗೌ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆದಿದೆ.
ಸದ್ಯ ಇರುವ ಸುದ್ದಿಯ ಪ್ರಕಾರ ಮುಂದಿನ ಸಮ್ಮೇಳನಕ್ಕೆ ಬೆಂಗಳೂರು ಫೇವರಿಟ್!
ಬ್ರೇಕಿಂಗ್ ನ್ಯೂಸ್ .....
6:14 PM
Posted by ಆಲೆಮನೆ
ಗದುಗಿನ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡದ ಮುಖ್ಯಮಂತ್ರಿ ಶ್ರೀ. ಬಿ.ಎಸ. ಯೆಡಿಯೂರಪ್ಪನವರು ಗೈರು!
ಹೌದು ನಾಳೆಯ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯನ್ನು ನೆರವೇರಿಸಬೇಕಿದ್ದ ಯಡಿಯೂರಪ್ಪನವರು ತಮ್ಮ ಸಚಿವ ಗಣದೊಂದಿಗೆ ಇಂದೋರ್ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಹೋಗಿರುವುದರಿಂದ ಅವರ ಅನುಪಸ್ಥಿತಿ ಅನಿವಾರ್ಯವಂತೆ! ಅವರ ಜೊತೆ ಅನಂತಕುಮಾರ್ ಮತ್ತಿತರ ಪ್ರಮುಖ ಸಚಿವ ಮಹಾಶಯರೂ ಕೂಡ ಅಲ್ಲೇ ಠಿಕಾಣಿ ಹೂಡಿರುವುದರಿಂದ ಸಮ್ಮೇಳನ ಸಾಹಿತ್ಯಮಾಯವಾಗುವ ಸದಾವಕಾಶ ಮತ್ತು ಒಂದು ಕನಸನ್ನು ಬಿತ್ತಿದೆ.
ಸರ್ಕಾರದ ಪರವಾಗಿ ಜಿಲ್ಲಾ ಉಸ್ತುವಾರೀ ಸಚಿವ ಶ್ರೀರಾಮುಲು ಒಬ್ಬರೇಶ್ರೀರಾಮ!
ಬ್ರೇಕಿಂಗ್ ನ್ಯೂಸ್ .....
12:03 PM
Posted by ಆಲೆಮನೆ

ಅವಧಿ ಮತ್ತು ಆಲೆಮನೆ ಎರಡೂ ಜೋಡಿಯಾದ ಪರಿಣಾಮವೇ ‘ನುಡಿ ನಮನ’ ಎಂಬ ಹೊಸ ಬ್ಲಾಗ್ .ಕನ್ನಡ ಸಾಹಿತ್ಯ ಸಮ್ಮೇಳನವೆನ್ನುವುದು ಸಾಹಿತ್ಯ ಜಾತ್ರೆಯೋ? ಜನ ಜಾತ್ರೆಯೋ? ಎಂಬ ಪ್ರಶ್ನೆಗಳಿವೆಯಾದರೂ ಕನ್ನಡ ಜಾತ್ರೆ ಅನ್ನೋದರಲ್ಲಿ ಯಾವುದೇ ಅನುಮಾನಗಳಿಲ್ಲ. ಕೆಲವರಿಗಿದು ಸೆಮಿನಾರು-ಘೋಷ್ಠಿಗಳ ಗಂಭೀರ ಚಿಂತನವಾದರೆ, ಮತ್ತೆ ಕೆಲವರಿಗಿದು ಮಿತ್ರಮಂಡಳಿ, ಇನ್ನೂ ಕೆಲವರಿಗಿದು ಪುಸ್ತಕ ಸಂತೆ, ಇನ್ನುಳಿದವರಿಗೆ ಪ್ರವಾಸದ ಮೋಜು! ಇನ್ನೂ ಕೆಲವರಿರುತ್ತಾರೆ ಅವರಿಗಿದು ಭರ್ಜರಿ ವ್ಯಾಪಾರ, ಮತ್ತೊಂದು ವಿಶೇಷ ವರ್ಗವಿದೆ ಅವರಿಗಿದು ಉರವಣಿಗೆಯ ವೇದಿಕೆ. ಹೀಗೆ ಅವರವರ ಭಾವಕ್ಕೆ ಅವರ ಭಕುತಿಗೆ ಎಂಬಂತೆ ನಡೆದುಕೊಂಡು ಬಂದಿರುವ ಸಾಹಿತ್ಯ ಸಮ್ಮೇಳನದ ಫುಲ್ ಸಚಿತ್ರ ಕ್ಷಣ ಕ್ಷಣದ ವರದಿ ನಿಮ್ಮ ಮುಂದೆ, ನಾಳೆಯಿಂದ....
ನುಡಿನಮನದಲ್ಲಿ ನಾಳೆ ಬಿಸಿ ಬಿಸಿ..
6:50 PM
Posted by ಆಲೆಮನೆ
ಕನ್ನಡದ ರಂಗಭೂಮಿಗೆ ಅತ್ಯಂತ ಶ್ರೀಮಂತ ಇತಿಹಾಸವಿದೆ. ಇಂದು ಕೂಡ ಬೇರೆ ಇತರತ್ರ ಭಾಷೆಗಳಿಗಿಂತ ಕನ್ನಡದ ರಂಗಭೂಮಿ ಹೆಚ್ಚು ಕ್ರಿಯಾಶೀಲತೆಯಿಂದ ಕೂಡಿದೆ.ಈ ಕ್ರಿಯಾಶೀಲ ಶ್ರೀಮಂತಿಕೆಗೂ ಕನ್ನಡ ಸಾಹಿತ್ಯಕ್ಕೂ ನಡುವಿನ ಸೂಕ್ಷ್ಮ ಸಂಬಂಧದ ಕುರಿತು ಸದ್ಯ ಮೈಸೂರಿನ ರಂಗಾಯಣದ ನಿರ್ದೇಶಕರಾಗಿರುವ ಲಿಂಗದೇವರು ಹಳೆಮನೆ ಚರ್ಚಿಸಿದ್ದಾರೆ.ನಿರೀಕ್ಷಿಸಿ ನಾಳೆ...
ಕರ್ನಾಟಕದಲ್ಲಿ ಕನ್ನಡಕ್ಕೊಂದು ಅಭಿವೃದ್ಧಿ ಪ್ರಾಧಿಕಾರ ಇರುವುದು ಕನ್ನಡದ ನೈಜ ಸ್ಥಿತಿಗತಿಯನ್ನು ತೋರಿಸುತ್ತದೆ. ಇರಲಿ . ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಗಿರಬೇಕೆನ್ನುವುದು ಉಸಿರಾಟದಷ್ಟೇ ಸಹಜ. ಆದರೆ ಕರ್ನಾಟಕ ಏಕೀಕರಣಗೊಂಡ ಈ ೫೩ ವರ್ಷಗಳಲ್ಲಿ ನೂರಾರು ಸರಕಾರೀ ಜಿಓಗಳು ಈ ವಿಷಯವಾಗಿ ಹೊರಡಿಸಲ್ಪತ್ತಿದ್ದರೂ ಮೊನ್ನೆ ಕೂಡ ಮುಖ್ಯಮಂತ್ರಿಗಳು ಈ ವಿಷಯವಾಗಿ ಗುಡುಗಬೆಕಾಯಿತು. ಈ ಎಲ್ಲ ಹಿನ್ನಲೆಯಲ್ಲಿ ಸಾಂಸ್ಕೃತಿಕ ಲೋಕದಲ್ಲಿ ತೊಡಗಿಸಿಕೊಂಡಿರುವ ಹಿರಿಯರು ಎಂ. ಕೆ. ಭಾಸ್ಕರ್ ರಾವ್ ಅವರು ತಮ್ಮ ಜ್ಹುಳುಪಾದ ಲೇಖನಿ ಪ್ರಯೋಗಿಸಿದ್ದಾರೆ. ನಾಳೆ ನಿರೀಕ್ಷಿಸಿ........
ಬ್ರೇಕಿಂಗ್ ನ್ಯೂಸ್ .....
7:24 AM
Posted by ಆಲೆಮನೆ
ನಿರೀಕ್ಷಿಸಿ ನಾಳೆ....
ಗದಗದಲ್ಲಿ ಜರುಗಲಿರುವ ೭೬ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ - ನಿಮ್ಮ ನುಡಿನಮನದಲ್ಲಿ!
ಯಾವ ಯಾವ ಘೋಷ್ಟಿಗ್ಲುಂಟು ಈ ಬಾರಿ? ಸಂಮಾನಗಳಾರಾರಿಗೆ? ಅದರಲ್ಲಿ ಒಂದನ್ನ ಪರಿಚಿತ ಮುಖವಿದೆಯೇ? ಅದು ಸರಿ ಯಾರ್ಯಾರು ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಸ್ಟೇಜ್ ಹತ್ತುತ್ತಿದ್ದಾರೆ? ಯಾವ ವಿಷಯ? ಏನು ಮಾತು? ಈ ನಿಮ್ಮ ಎಲ್ಲ ಪ್ರಶ್ನೆಗಳಿಗೆ ನಾಳೆಯೇ ಉತ್ತರ....ನಾಳೆ ನುಡಿನಮನ ನೋಡಲು ಮರೆಯದಿರಿ.
ಬ್ರೇಕಿಂಗ್ ನ್ಯೂಸ್ .....
6:23 AM
Posted by ಆಲೆಮನೆ
ಕನ್ನಡದ ಮೇಷ್ಟ್ರು, ಸದ್ಯ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರು, ಕನ್ನಡ ಸಾಹಿತ್ಯ ಸಮ್ಮೇಳನದ ಉಸ್ತುವಾರಿ ಹೊತ್ತವರು ಡಾ. ನಲ್ಲೂರು ಪ್ರಸಾದ್, ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ `ನುಡಿನಮನ'ದೊಂದಿಗೆ ಮಾತನಾಡಿದ್ದಾರೆ. ಪ್ರಸ್ತುತ ಸಾಹಿತ್ಯ ಸಮ್ಮೇಳನ, ಕಸಾಪ ಮತ್ತು ಕನ್ನಡದ ಸ್ಥಿತಿಗತಿಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಸಂಪೂರ್ಣ ಸಂದರ್ಶನ - ನಾಳೆ ನಿರೀಕ್ಷಿಸಿ......
ಬ್ರೇಕಿಂಗ್ ನ್ಯೂಸ್ .....
6:21 AM
Posted by ಆಲೆಮನೆ
ಇಂದಿನ ಅತಿಪ್ರಮುಖ ಕನ್ನಡ ಲೇಖಕರಲ್ಲೊಬ್ಬರು ವಸುಧೇಂದ್ರ. ವ್ಯಾವಹಾರಿಕವಾಗಿ IT ಜಗತ್ತಿನಲ್ಲಿ ಮುಳುಗಿ ಹೋಗಿದ್ದರೂ, ಕನ್ನಡ ಸಾಹಿತ್ಯದ ಸವಿರುಚಿಯನ್ನು ಉಂಡವರು, ಉಣಬಡಿಸುತ್ತಿರುವವರು. ವಸುಧೇಂದ್ರ ಕನ್ನಡ ಕಥಾಲೋಕದ ಪ್ರಪಿತಾಮಹ ಎಂದೇ ಗುರುತಿಸಲಾದ ಮಾಸ್ತಿಯವರ ಕಥೆಗಳು ಮತ್ತು ಅವರ ಅನುಭವದ ಕುರಿತು ಬರೆದಿದ್ದಾರೆ. ಅವರು ಹೇಗೆ ಇಂದಿಗೂ ಮೇಲ್ಪಂಕ್ತಿಯಲ್ಲಿ ನಿಂತು ಮಾರ್ಗದರ್ಶಕರಾಗಿದ್ದಾರೆ ಎಂದು ನಮ್ಮೊಡನೆ ಹಂಚಿಕೊಳ್ಳಲಿದ್ದಾರೆ....
ಬ್ರೇಕಿಂಗ್ ನ್ಯೂಸ್ .....
6:33 PM
Posted by ಆಲೆಮನೆ
ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಉತ್ತರ ಕರ್ನಾಟಕದ ಗದಗದಲ್ಲಿ. ಉತ್ತರ ಕರ್ನಾಟಕಕ್ಕೆ ನಮ್ಮ ಸರ್ಕಾರಗಳು ಮಲತಾಯಿ ಧೋರಣೆ ತೋರುತ್ತಿರುವುದೂ, ಆ ಭಾಗ ಅಭಿವೃದ್ಧಿಯಿಂದ ವಂಚಿತವಾಗಿ ಸೊರಗುತ್ತಿರುವುದು ನಾವೆಲ್ಲರೂ ಬಲ್ಲ ವಿಚಾರವೇ. ಇದೆ ಪ್ರತ್ಯೇಕ ರಾಜ್ಯದ ಕೂಗೇಳುವಂತೆ ಮಾಡಿದೆ.ಈ ಹಿನ್ನಲೆಯಲ್ಲಿ ಕನ್ನಡದ ಹಿರಿಯ ಚೇತನ ಡಾ. ಪಾಟೀಲ ಪುಟ್ಟಪ್ಪ `ಕರ್ನಾಟಕ ಇಂದು ಏನಾಗಬೇಕಿದೆ?' ಎಂದು ಮಾರ್ಗದರ್ಶನ ಮಾಡಿದ್ದಾರೆ.ನಾಳೆ ನಿರೀಕ್ಷಿಸಿ.......ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವವರು ಕರುನಾಡ ಹಿರಿಯಕ್ಕನಂತಹ ಗೀತ ನಾಗಭೂಷಣ್ರವರು. ಸಾಹಿತಿಗಳು ಅಂದರೆ ನಮಗೆ ಮೊದಲು ಬರುವ ಚಿತ್ರವೇ ಜುಬ್ಬಾ, ಪೈಜಾಮ, ಗಡ್ಡ,....ಆ ಕಲ್ಪನೆಯಲ್ಲಿ ಸೀರೆ ಏಕಿಲ್ಲ ಎಂಬುದರ ಕುರಿತು ಶಶಿಕಲ ವೀರಯ್ಯಸ್ವಾಮಿಯವರು ಚರ್ಚಿಸಲಿದ್ದಾರೆ.ನಾಳೆ ನಿರೀಕ್ಷಿಸಿ.......
ಬ್ರೇಕಿಂಗ್ ನ್ಯೂಸ್ .....
6:38 AM
Posted by ಆಲೆಮನೆ
ಶಶಿಧರ್ ಭಟ್ - ಕನ್ನಡ ಪತ್ರಿಕೋದ್ಯಮದ ಹಿರಿ ತಲೆ. ಸುವರ್ಣ ನ್ಯೂಸ್ಗೆ ಒಂದು ಭದ್ರ ತಳಪಾಯ ಹಾಕಿಕೊಟ್ಟು ಈಗ ಜುಪಿಟರ್ ನೆಟ್ವರ್ಕ್ಸ್ನಲ್ಲಿದ್ದಾರೆ. ಅವರ ಅನುಭವ ಅಪಾರ. ೮೦ರ ದಶಕದಿಂದೀಚೆಗಿನ ಸಾಹಿತ್ಯ ಸಮ್ಮೇಳನಗಳ ಹಿನ್ನಲೆಯಲ್ಲಿ ಅವರು ಸಾಹಿತ್ಯ ಮತ್ತು ರಾಜಕೀಯದ ಸೂಕ್ಷ್ಮ ಸಂಬಂಧದ ಕುರಿತು ಮನೋಜ್ಞವಾಗಿ ಚರ್ಚಿಸಲಿದ್ದಾರೆ.
ನಾಳೆ ನಿರೀಕ್ಷಿಸಿ......
ಸಂಡೆ ಬೊನಾನ್ಜ....ನಾಳೆ ಎರಡು ಲೇಖನ!
7:39 PM
Posted by ಆಲೆಮನೆ
ನಾಗರಾಜ ವಸ್ತಾರೆ ವೃತ್ತಿಯಲ್ಲಿ ಆರ್ಕಿಟೆಕ್ಟ್. ನಿತ್ಯ ಬೆಂಗಳೂರಿನ ಎರಡು ತದ್ವಿರುದ್ಧ ಜಗತ್ತುಗಳಲ್ಲಿ ಹೊಯ್ದಾಡುವವರು, ನಮ್ಮಲ್ಲನೇಕರಂತೆ. ಒಂದು ಹೊರಜಗತ್ತಿನ ಇಂಗ್ಲೀಷ್ ಲೋಕವಾದರೆ ಮತ್ತೊಂದು ಒಳಮನೆಯ ಕನ್ನಡದ ಸವಿಲೋಕ. ಆದ್ದರಿಂದಲೇ ವಸ್ತಾರೆ ಇಂದು ಹೆಚ್ಚು ಪ್ರಸ್ತುತರಾಗುತ್ತಾರೆ. ಇಂಗ್ಲೀಷ್ - ಕನ್ನಡ - ಬೆಂಗಳೂರಿನ ಕುರಿತು ನಾಗರಾಜ ವಸ್ತಾರೆಯವರ ಆಪ್ತ ಲೇಖನ ನಾಳೆ.
ನಿರೀಕ್ಷಿಸಿ....
ಡಿ. ಎಸ್. ನಾಗಭೂಷಣ ಕನ್ನಡದ ಸಮಾಜವಾದಿ ವಲಯದ ವಿಶಿಷ್ಟ ವಸ್ತುನಿಷ್ಠ ಚಿಂತಕ.
ಕನ್ನಡ ತಮಿಳಿನ ವಿಶಿಷ್ಟ ಸಂಬಂಧವನ್ನು ಕುರಿತು ವಿಶಿಷ್ಟ ಒಳನೋಟಗಳ ಮಹತ್ವದ ಲೇಖನ ನಾಳೆ.
ನಿರೀಕ್ಷಿಸಿ....
ಬ್ರೇಕಿಂಗ್ ನ್ಯೂಸ್ ...........
6:12 PM
Posted by ಆಲೆಮನೆ
ಡಾ. ಕೆ. ಮರುಳುಸಿದ್ದಪ್ಪ ಕನ್ನಡದ ವಿಶಿಷ್ಟ ಪ್ರತಿಭೆ.
ನಾಳೆ ಅವರ ನೇರ ನಿಷ್ಟುರ ಸಿಡಿಗುಂಡಿನಂತಹ ಹತ್ತು ಪ್ರಶ್ನೆಗಳು.
ಕನ್ನಡ ಚಳುವಳಿಯ ಎಲ್ಲ ಮುಖವಾಡಗಳನ್ನು
ಕಿತ್ತೊಗೆಯುವಂತಹ ಚರ್ಚಾಸ್ಪದ ಹತ್ತು ಪ್ರಶ್ನೆಗಳು.
ನಿರೀಕ್ಷಿಸಿ.....
ಬ್ರೇಕಿಂಗ್ ನ್ಯೂಸ್ .....
7:05 PM
Posted by ಆಲೆಮನೆ

ಈ ಕನ್ನಡದ ಅಖಾಡದೊಳ್ ಮೊದಲು ಇಳಿಯುತ್ತಿರುವ ಜಗಜಟ್ಟಿ,
ಓಪನಿಂಗ್ ಬ್ಯಾಟ್ಸ್ಮನ್ ನಮ್ಮನಿಮ್ಮೆಲ್ಲರ ನೆಚ್ಚಿನ
`ಚಂಪಾ' - ಪ್ರೊ.ಚಂದ್ರಶೇಖರ ಪಾಟೀಲ! ನಾಳೆ ಚಂಪಾ!
ನಿರೀಕ್ಷಿಸಿ......






