ಗೀತ ನಾಗಭೂಷಣರ ಭಾಷಣ, ಪೀಠ ಸಲಹೆಗೆ ಕೆಲವು ಪ್ರತಿಕ್ರಿಯೆಗಳು.
7:41 PM
Posted by ಆಲೆಮನೆ
ಇದು ಒಂದು ಉತ್ತಮ ಒಳ್ಳೆಯ ಭಾಷಣ, ಮಾಮೂಲಿ ಚರ್ವಿತ ಚರ್ವಣ ಇಲ್ಲ. ಸಮಕಾಲೀನ ದುರಂತಗಳ ಕಡೆ ಲಕ್ಷ್ಯ ಕೊಟ್ಟಿದ್ದು ಹಿಡಿಸಿತು. ಇದ್ದೀಯ ಭಾಷಣ ಅವರು ಬೆಳೆದು ಬಂದ ದಲಿತ ಬಂಡಾಯದ ಹಿನ್ನಲೆಯಲ್ಲಿ ಮೂಡಿ ಬಂದಿದ್ದು ಒಟ್ಟಾರೆಯಾಗಿ ಸಮಾಜಮುಖಿ ಚಿಂತನೆಯ ಮೈಗೂಡಿಸಿಕೊಂಡ ಪ್ರಗತಿಪರ ನಿಲುವು ತಾಳಿರುವ ಭಾಷಣ.
ಗೀತಾನಾಗಭೂಷಣರವರು ತಮ್ಮ ಭಾಷಣದಲ್ಲಿ ಕರ್ನಾಟಕದ ಮಟ್ಟಿಗೆ ಜ್ಞಾನಪೀಠ ಪ್ರಶಸ್ತಿಯ ಸರಿಸಮನಾದಂತಹ ಮತ್ತೊಂದು ಪ್ರಶಸ್ತಿಯನ್ನು ಸ್ಥಾಪಿಸಬೇಕೆಂದು ಸರ್ಕಾರವನ್ನು ಕೋರುವುದು ಹೊಸ ಪ್ರವೃತ್ತಿಯಾಗಿದೆ. ಮೊದಲಿಗೆ ಇದ್ದ ಪ್ರಶಸ್ತಿಗಳನ್ನು ಪಡೆಯಲು ಲಾಬಿ ನಡೆಯುತ್ತಿತ್ತು. ಈಗಿನ ಹೊಸ ಟ್ರೆಂಡ್, ಇದು. ಪ್ರಶಸ್ತಿಗಳನ್ನು ಸ್ಥಾಪಿಸಲು ಲಾಬಿ ಶುರುವಾಗಿದೆ. ಈಗ ಕೊಡಮಾಡುತ್ತಿರುವ ಅನೇಕ ಪ್ರಶಸ್ತಿಗಳೇ ಸಾಂಸ್ಕೃತಿಕ ಮೌಲ್ಯವಿಲ್ಲದಿರುವಾಗ ಹೊಸ ಪ್ರಶಸ್ತಿಗಳ ಸ್ಥಾಪನೆ ಅರ್ಥವಿಲ್ಲದ ತೋರಿಕೆಯಾದಿತು. ಗೀತಾ ನಾಗಭೂಷಣರವರು ವೇದಿಕೆಯ ಮೇಲೆ ಇದ್ದ ಸರ್ಕಾರದ ಏಕೈಕ ಪ್ರತಿನಿಧಿ ಶ್ರೀ ರಾಮುಲುರವರನ್ನು ಓಲೈಸುತ್ತಿದ್ದ ರೀತಿ ಹಿನ್ನೆಲೆಗು ವಯಸ್ಸಗಿದೆಯೆಂದು ನನ್ನ ನಂಬಿಕೆ.
ಹಿಂದೆ- ನುಡಿದರೆ ಮುತ್ತಿನ ಹಾರದಂತಿರಬೇಕು, ಆದರೆ ಈಗ- ನುಡಿದರೆ ವಿಧಾನಸೌಧ ಗದಗದ ನಡಗು ವಂತಿರಬೇಕು.ಸರ್ವಾಧ್ಯಕ್ಷರ ಪ್ರಶಸ್ತಿಯ ಆಶಯವೇನೋ ಸರಿಯಿರಬಹುದು. ಆದರೆ, ಒಂದನ್ನು ಯೋಚನೆ ಮಾಡಬೇಕು. ನಡ ನೂರೆಂಟು ವನ್ತಿರಬೇಕು ಸರಮಾಲೆಯೇ ಇನ್ನು ಪ್ರಶಸ್ತಿಯ ವಿಷಯ ಅರ್ಹತೆಯನ್ನು, ಇನ್ನು ಪ್ರಶಸ್ತಿಯ ವಿಚಾರ. ಸಂಪಾದಿಸಿಕೊಳ್ಳೊ ನಿಟ್ಟಿನಲ್ಲಿ ದುಡಿಯೋದು ಮುಖ್ಯ. ಪ್ರಶಸ್ತಿಯ ಸೃಷ್ಟಿಯಲ್ಲ.
- ಹಂಪಾ ನಾಗರಾಜಯ್ಯ
Post a Comment