ಭಾರತದ ಮಟ್ಟದಲ್ಲಿ ಜ್ಞಾನಪೀಠ, ಕರ್ನಾಟಕದ ಮಟ್ಟದಲ್ಲಿ .....?
ಈ ಕೊರತೆಯನ್ನು ಗೀತಾ ನಾಗಭೂಷಣರವರು ಗುರುತಿಸಿದ್ದಾರೆ. ಅವರು ತಮ್ಮ ಅಧ್ಯಕ್ಷೀಯ ಭಾಷಣದ ನಡುವೆ ಕರ್ನಾಟಕದ ಮಟ್ಟದಲ್ಲಿ ಸಾಹಿತ್ಯಕ್ಕೆಂದು ಜ್ನಾನಪೀಥದಂತಹ ಅತ್ಯುನ್ನತ ಪ್ರಶಸ್ತಿಯೊಂದನ್ನು ಸ್ಥಾಪಿಸಬೇಕಿರುವುದು ತುರ್ತಿನ ಅಗತ್ಯವೆಂದರಲ್ಲದೆ, ಈ ವಿಷಯವಾಗಿ ವೇದಿಕೆಯ ಮೇಲಿದ್ದ ಸರ್ಕಾರದ ಏಕೈಕ ಪ್ರತಿನಿಧಿ ಶ್ರೀ ರಾಮುಲುರವರನ್ನು ತಮ್ಮನೆಂದು ಕರೆದು, ಈ ವಿಚಾರವಾಗಿ ಅವರು ಈ ಕೂಡಲೇ ಗಮನ ಹರಿಸಬೇಕೆಂದು, ಅದಕ್ಕೆ ಅವರ ಒಂದು ದಿನದ ಸಂಪಾದನೆಯೇ ಭರ್ಜರಿ ಮೊತ್ತವಾದೀತು, ಎಂದು ಹೇಳಿ ಅಚ್ಚರಿಪದಿಸಿದರು.