ಜಾಗತೀಕರಣ ಹೆಬ್ಬುಲಿಯಲ್ಲ. ಅದನ್ನು ತೋರಿಸಿ, ನಮ್ಮನ್ನು ಹೆದರಿಸುತ್ತಿದ್ದಾರೆ. ಭಯದ ಅಗತ್ಯವಿಲ್ಲ. ಜಾಗತಿಕರಣಕ್ಕೆ ಮತ್ತು ಅಪರಿಮಿತ ವಲಸೆಗೆ ತಕ್ಕ ಉತ್ತರ ನಮ್ಮ ಹಳ್ಳಿಗಳಲ್ಲಿ ಬೆಸಾಯಾಧಾರಿತ ಕೈಗಾರಿಕೆಗಳನ್ನು ಬೆಳೆಸುವುದು. ಇದಕ್ಕೆ ಉತ್ತಮ ಉದಾಹರಣೆ, ಹೆಗ್ಗೋಡಿನಲ್ಲಿ- ರಂಗಕರ್ಮಿ ಪ್ರಸನ್ನ ಅವರು ನಡೆಸುತ್ತಿರುವ ಚರಕ ಸಂಸ್ಥೆ. ಇಂತಹ ಪ್ರಯತ್ನಗಳು ನಾಡಿನಲ್ಲೆಲ್ಲ ನಡೆಯುವಂತಾಗಬೇಕು.


-ಕಡಿದಾಳ್ ಶಾಮಣ್ಣ