ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಉತ್ತರ ಕರ್ನಾಟಕದ ಗದಗದಲ್ಲಿ. ಉತ್ತರ ಕರ್ನಾಟಕಕ್ಕೆ ನಮ್ಮ ಸರ್ಕಾರಗಳು ಮಲತಾಯಿ ಧೋರಣೆ ತೋರುತ್ತಿರುವುದೂ, ಆ ಭಾಗ ಅಭಿವೃದ್ಧಿಯಿಂದ ವಂಚಿತವಾಗಿ ಸೊರಗುತ್ತಿರುವುದು ನಾವೆಲ್ಲರೂ ಬಲ್ಲ ವಿಚಾರವೇ. ಇದೆ ಪ್ರತ್ಯೇಕ ರಾಜ್ಯದ ಕೂಗೇಳುವಂತೆ ಮಾಡಿದೆ.
ಈ ಹಿನ್ನಲೆಯಲ್ಲಿ ಕನ್ನಡದ ಹಿರಿಯ ಚೇತನ ಡಾ. ಪಾಟೀಲ ಪುಟ್ಟಪ್ಪ `ಕರ್ನಾಟಕ ಇಂದು ಏನಾಗಬೇಕಿದೆ?' ಎಂದು ಮಾರ್ಗದರ್ಶನ ಮಾಡಿದ್ದಾರೆ.


ಕರ್ನಾಟಕ ಏನಾಗಬೇಕು?

ಕನ್ನಡ ಭಾಷೆಯನ್ನು ಆಡುವ ಪ್ರದೇಶವನ್ನೆಲ್ಲ ಕನ್ನಡ ನಾಡು ಎಂದು ಕರೆಯುತ್ತಿದ್ದರು. ಆದರೆ ಕನ್ನಡ ಭಾಷೆಯನ್ನು ಆಡುವ ಜನರು ಒಂದೇ ಪ್ರಭುತ್ವಕ್ಕೆ ಎಂದೂ ಒಳಪಟ್ಟಿರಲಿಲ್ಲ. ಕರ್ನಾಟಕವೆಂಬ ಹೆಸರಿನ ರಾಜ್ಯವೂ ಇರಲಿಲ್ಲ. ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿಕೊಂಡಿದ್ದ ಪ್ರದೇಶವನ್ನು ಕನ್ನಡ ನಾಡೆಂದು ಕರೆಯುತ್ತಿದ್ದರು. ಕರ್ನಾಟಕ ಎನ್ನುವುದು ಒಂದು ರಾಜಕೀಯ ಸತ್ಯವಾಗಿ ಇರಲಿಲ್ಲದ ಕಾಲದಲ್ಲಿಯೂ ಕನ್ನಡಿಗರನ್ನು ಅವರ ವಿಶಿಷ್ಟ ಸಂಸ್ಕೃತಿಯ ಕಾರಣದಿಂದ, ಕರ್ನಾಟಕರ್ ಎಂದು ಕರೆಯುತ್ತಿದ್ದರು. ಇದರ ಉಲ್ಲೇಖ, ಪ್ರಾಚೀನ ತಮಿಳು ಕೃತಿಯಾದ ಶಿಲಪ್ಪಾದಿಕಾರನ್ ಎಂಬುದರಲ್ಲಿಯೂ ಬಂದಿದೆ. ಕನ್ನಡಿಗರ ಮನಸ್ಸಿನಲ್ಲಿ ಕರ್ನಾಟಕ ಎನ್ನುವುದು ಇದ್ದೇ ಇದ್ದಿತು. ಆದರೆ ಆ ಅಸ್ಪಷ್ಟ ಕಲ್ಪನೆ ಮೂರ್ತ ಸ್ವರೂಪ ಪಡೆದು ಪ್ರತ್ಯಕ್ಷ ಸತ್ಯವೆನಿಸುವ ಸಂಭವವಾಗಲಿ ಸಾಧ್ಯವಾಗಲಿ ಇರಲಿಲ್ಲ.

ಅನೇಕ ಐತಿಹಾಸಿಕ ಕಾರಣದಿಂದ ಕನ್ನಡ ಭಾಷೆಯನ್ನು ಆಡುವ ಜನರು ಇಪ್ಪತ್ತೆರಡು ಆಡಳಿತಗಳಲ್ಲಿ ಹಂಚಿ ಹೋಗಿದ್ದರು. 1947 ರಲ್ಲಿ ಬ್ರಿಟಿಷರು ಈ ದೇಶವನ್ನು ಬಿಟ್ಟು ತೊಲಗುತ್ತಾರೆ ಎನ್ನುವ ಸ್ಪಷ್ಟ ಸೂಚನೆ ಕಂಡುಬಂದಿದ್ದಿತು. ಆದರೆ ಬ್ರಿಟಿಷರು ಹೋಗಿ ಇಲ್ಲಿಯ ದೇಶೀಯ ಸಂಸ್ಥಾನಗಳು ಈ ದೇಶದಲ್ಲಿ ಇಲ್ಲದಂತಾಗುತ್ತವೆ ಎನ್ನುವುದನ್ನು ಊಹಿಸಲು ಯಾರೊಬ್ಬರಿಂದಲೂ ಸಾಧ್ಯವಿರಲಿಲ್ಲ. ಆದರೆ ಕರ್ನಾಟಕ ರಾಜ್ಯ ರಚನೆ ಆಗಬೇಕೆನ್ನುವ ಕೂಗು ಇದ್ದೇ ಇದ್ದಿತು ಬ್ರಿಟಿಷ್ ಅಧಿಪತ್ಯಕ್ಕೆ ಒಳಪಟ್ಟಿದ್ದ ಕನ್ನಡ ಪ್ರದೇಶಗಳು ಒಂದು ರಾಜ್ಯವಾಗಬೇಉ ಎನ್ನುವ ಬೇಡಿಕೆ, ಇಂದು ಹೋರಾಟದ ಸ್ವರೂಪವನ್ನು ಪಡೆದುಕೊಂಡಿವೆ. ಭಾರತವು ಸ್ವತಂತ್ರವಾಗುವುದಕ್ಕೆ ಮೂವತ್ತು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದ ಸೈಮನ್ ಅವರ ಸಲಹೆಯ ಮೇರೆಗೆ 1935 ನೆಯ ರಾಜ್ಯ ಘಟನೆ ರೂಪುಗೊಂಡಿತು. ಆ ಕಾನೂನಿನ ಅನ್ವಯ ರಚನೆಗೊಂಡ ಸಿಂಧ ಒರಿಸ್ಸಾ ಪ್ರಾಂತಗಳು 1937 ರಲ್ಲಿ ಅಸ್ತಿತ್ವದಲ್ಲಿ ಒಂದು ಕಾರ್ಯಾರಂಭ ಮಾಡತೊಡಗಿದವು.
ಬ್ರಾಹ್ಮಣೇತರ ಪಕ್ಷದ ಮುಂದಾಳುವಾಗಿದ್ದ ಸಿದ್ದಪ್ಪ ಕಂಬಳಿಯವರು (ಆಗ ಅವರಿನ್ನೂ ಸರ್ ಆಗಿರಲಿಲ್ಲ) ಸೈಮನ್ ಕಮೀಷನ್ ಮುಂದೆ ಸಾಕ್ಷ್ಯ ನುಡಿಯಲು ಹೋಗಬೇಕೆಂದಿದ್ದರು.

ಆದರೆ ಆಗಿನ ಕಾಂಗ್ರೆಸ್ ಮುಖಂಡರಾದ ಗಂಗಾಧರ ದೇಶಪಾಂಡೆ, ಕೌಜಲಗಿ ಶ್ರೀನಿವಾಸ ರಾವ್, ರಂಗನಾಥ ದಿವಾಕರ, ಆಲೂರು ವೆಂಕಟರಾಮ್ ಅವರು, ಕಂಬಳಿಯವರನನು ಬಿದ್ದು ಬೇಡಿಕೊಂಡರು. 'ನಾವು ಸೈಮನ್ ಆಯೋಗಕ್ಕೆ ಬಹಿಷ್ಕಾರ ಹಾಕಿದ್ದೇವೆ. ನೀವು ಆ ಆಯೋಗದ ಎದುರು ಹೋಗಿ ನಮ್ಮ ಮರ್ಯಾದೆ ಕಳೆಯಬೇಡಿ' ಅವರು ಕಂಬಳಿಯವರನ್ನು ತಡೆಹಿಡಿದ ಕಾರಣ ಅವರು ಸೈಮನ್ ಕಮೀಷನ್ವರೆಗೆ ಹೋಗಲಿಲ್ಲ. ಆಗ ಅವರು ಕಮೀಷನ್ ಎದುರು ಹೋಗಿದ್ದಾರೆ. ಬ್ರಿಟಿಷ್ ಅಧಿಪತ್ಯದ ಕನ್ನಡ ಪ್ರದೇಶಗಳು 1937 ರಲ್ಲಿಯೇ ಕರ್ನಾಟಕ ಪ್ರಾಂತವೆಂಬ ಹೆಸರನ್ನು ಪಡೆದು ಒಂದು ರಾಜಕೀಯ ಘಟಕವಾಗಿ ಭಾರತದ ಭೂಪಟದ ಮೇಲೆ ಕಾಣಿಸಿಕೊಳ್ಳುವ ಭಾಗ್ಯವನ್ನು ಪಡೆಯುತ್ತಿದ್ದವು.

ಕರ್ನಾಟಕ ಎನ್ನುವ ಭಾವನೆ, ಮೈಸೂರು ಸಂಸ್ಥಾನದ ಹೊರಗಿನ ಕನ್ನಡ ಪ್ರದೇಶಗಳಲ್ಲಿ ಉತ್ಕಟವಾಗಿದ್ದಂತೆ ಮೈಸೂರಿನಲ್ಲಿ ಉತ್ಕಟವಾಗಿರಲಿಲ್ಲ. ಕನ್ನಡ ಪ್ರಜ್ಞೆ, ಮೈಸೂರಿನ ಹೊರಗಿನ ಕನ್ನಡ ಪ್ರದೇಶದಲ್ಲಿಯೇ ಹೆಚ್ಚು ಜಾಗೃತವಾಗಿದ್ದಿತು. ಪ್ರತಿಷ್ಠಿತ ರಾಜರುಗಳಾದ ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರದವರುಮೈಸೂರಿನ ಹೊರಗಿನವರೇ ಆಗಿದ್ದರು. ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದ ಕನ್ನಡದ ಬಹುತೇಕ ಕವಿಗಳು ಮೈಸೂರಿನ ಹೊರಗಿನವರೇ ಆಗಿದ್ದಾರೆ. ಪಂಪ, ರನ್ನ, ಪೊನ್ನ, ಜನ್ನ ಕುಮಾರವ್ಯಾಸ, ಹರಿಹರ, ರಾಘವಾಂಕ, ಸರ್ವಜ್ಞ, ರತ್ನಾಕರ ವಣರ್ಿ, ಮುದ್ದಣ್ಣ ಎಲ್ಲರೂ ಮೈಸೂರಿನ ಹೊರಗಿನ ಕರ್ನಾಟಕದವರೇ ಆಗಿದ್ದಾರೆ.

ಸಾಮಾಜಿಕ ಕ್ರಾಂತಿಗೆ ಕಾರಣವಾದ ವಚನ ಸಾಹಿತ್ಯ ದಾಸ ಸಾಹಿತ್ಯಗಳ ಉಗಮ ಸ್ಥಾನ ಮೈಸೂರು ಅಲ್ಲ, ಉತ್ತರ ಕರ್ನಾಟಕ . . . .ಕರ್ನಾಟಕೀ ಸಂಗೀತದ ಉಗಮ ಸ್ಥಳ ಚಾಲುಕ್ಯರ ಬಾದಾಮಿ, ಹಿಂದೂಸ್ತಾನೀ, ಸಂಗೀತದ ನೆಲೆ ಗುಲ್ಬರ್ಗಾ. ಇಷ್ಟೆಲ್ಲ ವೈಭವದ ಐತಿಹಾಸಿಕ ಪರಂಪರೆಯನ್ನು ಪಡೆದಿದ್ದ ಕನ್ನಡ ಪ್ರದೇಶಗಳು ಮೈಸೂರನ್ನು ಒಳಗೊಂಡು ಒಂದು ರಾಜ್ಯವಾಗುವ ಭಾಗ್ಯವನ್ನು ಪಡೆದಿರಲಿಲ್ಲ. ಕನ್ನಡ ಭಾಷೆಯನ್ನು ಆಡುವ ಪ್ರದೇಶಗಳೆಲ್ಲ ಒಂದೇ ಪ್ರಭುತ್ವಕ್ಕೆ ಒಳಪಡಬೇಕು ಎನ್ನುವುದು ಇನ್ನೂ ಒಂದು ಕನಸಾಗಿ ಉಳಿದಿದ್ದ ಕಾಲದಲ್ಲೇ ಅಖಿಲ ಕನ್ನಡಿಗರ ಪ್ರಥಮ ಮಹಾಧಿವೇಶನವೊಂದು ನಿಜಲಿಂಗಪ್ಪ ಅವರ ಅಪೇಕ್ಷೆಯಂತೆ 1946ನೆಯ ಆಗಸ್ಟ್ ತಿಂಗಳು ದಾವಣಗೆರೆಯಲ್ಲಿ ಸಮಾವೇಶಗೊಂಡಿತು.

ಆಗ ಮೈಸೂರಿನಲ್ಲಿ ದಿವಾನರ ಆಡಳಿತ ನಡೆದಿದ್ದಿತು. ಆ ಮಹಾಧಿವೇಶನಕ್ಕೆ ಮೈಸೂರಿನ ನಾಮಾಂಕಿತ ಮುಂದಾಳುಗಳಾದ ಕೆ.ಸಿ.ರೆಡ್ಡಿ, ಕೆ.ಟಿ.ಭಾಷ್ಯಂ, ಎಚ್.ಸಿ.ದಾಸಪ್ಪ, ಎಚ್.ಸಿದ್ಧಯ್ಯ, ಟಿ.ಮುನಿಯಪ್ಪ, ಟಿ. ಸುಬ್ರಹ್ಮಣ್ಯ, ಎಚ್.ಕೆ.ವೀರಣ್ಣಗೌಡ, ಸಾಹುಕಾರ ಚನ್ನಯ್ಯ, ಕೆಂಗಲ್ ಹನುಮಂತಯ್ಯ ಮುಂತಾದವರೆಲ್ಲ ಬಂದಿದ್ದರು. ಆ ಮಹಾಧಿವೇಶನಕ್ಕೆ ಮುಂಬಯಿ ಮಂತ್ರಿ ಎಂ.ಪಿ. ಪಾಟೀಲರು ಅಧ್ಯಕ್ಷರಾಗಿದ್ದರು. ಮದ್ರಾಸ್ ಸರ್ಕಾರದ ಮಂತ್ರಿ ಕೆ.ಆರ್. ಕಾರಂತರು(ಶಿವರಾಮ ಕಾರಂತರ ಅಣ್ಣ) ಉದ್ಘಾಟಕರಾಗಿದ್ದರು.
ಆಗ ಮೈಸೂರಿನ ಮುಂದಾಳುಗಳು, ತಮ್ಮನ್ನು ಬಿಟ್ಟು ಕರ್ನಾಟಕ ಏಕೀಕರಣವನ್ನು ಮಾಡಿಕೊಳ್ಳಬಾರದೆಂದು ಆಲ್ಪರಿದು ಹೇಳಿಕೊಂಡರು. 'ನಾವು ಮಳೆಯಲ್ಲಿ ನೆನೆಯುತ್ತ ಹೊರಗೆ ಇದ್ದೇವೆ. ಚಳಿ ಹತ್ತಿಕೊಂಡು ನಡುಗುತ್ತಿದ್ದೇವೆ. ನೀವು ಒಬ್ಬರೇ ಬೆಚ್ಚಗೆ ಇರಬೇಡಿರಿ. ನಮ್ಮನ್ನು ಒಳಗೆ ಕರೆದುಕೊಳ್ಳಿರಿ'. ಕರ್ನಾಟಕದ ಬಗೆಗಿನ ಅವರ ಆಸಕ್ತಿ, ಮೈಸೂರಿನಲ್ಲಿ ಜವಾಬ್ದಾರೀ ಸಕರ್ಾರ ಬಂದು, ಅಧಿಕಾರ ತಮ್ಮ ಕೈಗೆ ಮುಖಂಡರ ಅನಾಸ್ಥೆಯಿಂದ ಕನರ್ಾಟಕ ಇಂದಿಗೂ ಕೊರಗುವಂತಾಗಿದೆ. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡುತ್ತಿದ್ದ ಯುವಕರನ್ನು ತಮ್ಮೆಡೆಗೆ ಕರೆದು ಸರ್ ಸಿದ್ಧಪ್ಪ ಕಂಬಳಿಯವರು ಹೇಳಿದ ಒಂದು ಮಾತು. ನಿನ್ನೆ ಮೊನ್ನೆ ಹೇಳಿದಂತೆ ನನ್ನ ನೆನಪಿನಲ್ಲಿ ಇಂದಿಗೂ ಉಳಿದುಕೊಂಡಿದೆ. ಆಗ ಅವರು ಹೇಳಿದ್ದರು. 'ಕರ್ನಾಟಕ ಏಕೀಕರಣ ಆಗುತ್ತದೆ. ಅದನ್ನು ತಪ್ಪಿಸುವುದು ಯಾರೊಬ್ಬರಿಂದಲೂ ಸಾಧ್ಯವಿಲ್ಲ. ಆದರೆ ನೀವು ಕತ್ತರೀ ಹುಡುಕುವವರ ಕೈಯಲ್ಲಿ ಸಿಗುತ್ತೀರಿ. ಮುದುಕನ ಮಾತೆಂದು, ಅವರು ಹೇಳಿದುದನ್ನು ನಾವು ಉಪೇಕ್ಷಿಸಿಬಿಟ್ಟೆದ್ದೆವು.

ಕಿಪ್ಲಿಂಗ್ಗಳು, ಪೂರ್ವವು ಪೂರ್ವವೇ, ಪಶ್ಚಿಮವು ಪಶ್ಚಿಮವೇ, ಅವರೆಡೂ ಎಂದೂ ಒಂದುಗೂಡುವುದಿಲ್ಲ.' ಎಂದು ಹೇಳಿದ್ದ. ಅವನ ಮಾತನ್ನು ಕರ್ನಾಟಕ ಪ್ರದೇಶಗಳಿಗೆ ಅನ್ವಯಿಸಿ, ಕೆಲವರು ಹೇಳುತ್ತಿದ್ದರು. ಅವರ ಮಾತು ನಮಗೆ ಒಪ್ಪಿಗೆ ಆಗಿರಲಿಲ್ಲ. ಕನರ್ಾಟಕ ಮೈಸೂರು ಬೇರೆ ಬೇರೆ ಅಲ್ಲ. ಅವೆರಡೂ ಒಂದೇ ದೇಹದ ಎರಡು ಭಾಗಗಳು ಎದು ನಾವು ಹೇಳುತ್ತಿದ್ದೆವು. ಈಗಲೂ ಕೂಡ ಅವು ಅನ್ಯೋನ್ಯವಾಗಿ ಕೂಡಿ ಬದುಕುವುದು, ಕೂಡಿ ಹೋಗುವುದು ಸಾಧ್ಯವಿದೆ. ಕನಡು ನನಸಾಗಬೇಕಾದರೆ, ಅದನ್ನು ನನಸು ಮಾಡುವ ಪ್ರಯತ್ನ ನಡೆಯಬೇಕು. ಚಿಕ್ಕ ರಾಜ್ಯಗಳು ಬೆಳೆಯಬಹುದು. ಆದರೆ ಅವುಗಳಿಗೆ ದೊಡ್ಡ ರಾಜ್ಯಗಳ ಪ್ರಭಾವ ಬರಲಾರದು.

ಮೈಸೂರಿನಲ್ಲಿ ಕರ್ನಾಟಕದ ಪ್ರೀತಿ ತುಂಬಿಕೊಂಡರೆ, ಉಳಿದುಕೊಂಡರೆ, ಈ ರಾಜ್ಯವು ಸಮಗ್ರವಾಗಿ ಮೈ ತುಂಬಿಕೊಂಡು, ಸಮೃದ್ಧಿಯನ್ನು ತಂದುಕೊಂಡು, ಭಾರತಕ್ಕೇ ಮಾದರಿ ಎನಿಸುವಂತೆ ಸುಂದರವಾಗಿ ಕಂಗೊಳಿಸುವುದು ಸಾಧ್ಯವಿದೆ. ಈ ರಾಜ್ಯದ ಸಾಧ್ಯತೆಗಳು ಸರ್ಕಾರವನ್ನು ನಡೆಸುವ ಮಂತ್ರಿಗಳಿಗೆ, ಸರ್ಕಾರದ ಆಡಳಿತ ಕಾರ್ಯಗಳನ್ನು ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಕಾಣಲಿಲ್ಲವಾದರೆ, ಈ ರಾಜ್ಯದ ಮುಖಚರ್ಯೆಯೇ ಬದಲಿಸುತ್ತದೆ. ನಾವು ದೃಷ್ಟಿ ಇರಿಸಿಕೊಂಡಂತೆ ಸೃಷ್ಟಿ ಕಾರ್ಯ ನಡೆಯುತ್ತದೆ. ಮೈಸೂರಿನವರು, ಮೈಸೂರಿನ ಹೊರಗಿನ ಕರ್ನಾಟಕದವರನ್ನು, ಮೈಸೂರಿನ ಹೊರಗಿನವರು ಮೈಸೂರಿನವರನ್ನು ಆಡಿಕೊಳ್ಳುವುದು ತಪ್ಪಬೇಕು. ಮೈಸೂರಿನ ಹೊರಗಿನ ಪ್ರದೇಶ ಹಿಂದುಳಿದಿರುವುದಕ್ಕೆ, ಆ ಪ್ರದೇಶದ ಶಾಸಕರು ಕಾರಣರೆಂದು, ಮೈಸೂರಿನವರು ಅವರೆಡೆಗೆ ಬೆರಳು ಮಾಡಿ ತೋರಿಸುತ್ತಿದ್ದಾರೆ.

ಅವರು ಇವರನ್ನು, ಇವರು ಅವರನ್ನು ಆಡಿಕೊಳ್ಳುವುದನ್ನು ಬಿಟ್ಟು ಪರಸ್ಪರರನ್ನು ಪ್ರೀತಿಸುವ ಸ್ವಭಾವವನ್ನು ಬೆಳೆಸಿಕೊಳ್ಳಬೇಕು. ಸಮಗ್ರ ರಾಜ್ಯ ಬೆಳೆಯಬೇಕೆನ್ನುವ ವಿಚಾರದೊಂದಿಗೆ ನಾವು ಸಹಮತ ಉಳ್ಳವರಾಗಬೇಕಾಗುತ್ತದೆ. ಈಗ ಇಲ್ಲಿ ರಾಜಕಾರಣಿಯ ಕೆಲಸ ಇಲ್ಲ, ಮುತ್ಸದ್ದಿಯ ಕೆಲಸ ಇದೆ. ಅಧಿಕಾರದ ಸೂತ್ರ ಹಿಡಿದವರು ಮನೆಯ ಉತ್ತರಾಧಿಕಾರವನ್ನು ಪಡೆದ ಉಡಾಫೆಯ ದತ್ತು ಮಗನಂತೆ ಉಲಕೋಚಿ ವರ್ತನೆ ಇರಿಸಿಕೊಳ್ಳದೆ, ತಾನು ಉಸ್ತುವಾರಿಗೆ ತೆಗೆದುಕೊಂಡ ಆಸ್ತಿಯನ್ನು ಸಂರಕ್ಷಿಸಿ ಅದನನು ಸಂವರ್ಧನೆ ಮಾಡಬೇಕೆನ್ನುವ ದೃಷ್ಟಿಯನ್ನು ಇರಿಸಿಕೊಳ್ಳಬೇಕು. ಕರ್ನಾಟಕವೆಂಬ ರಾಜ್ಯದ ದೇಹದ ಎಲ್ಲ ಅಂಗಾಂಗಗಳು ಸರಿಯಾಗಿ ಹವಣುಕಟ್ಟಾಗಿ ಬೆಳೆದರೇನೇ ಅದು ಸುಂದರಾಕೃತಿಯನ್ನು ಪಡೆದುಕೊಳ್ಳುತ್ತದೆ.

ಈ ರಾಜ್ಯವು ಸಮಗ್ರವಾಗಿ ಸುವ್ಯವಸ್ಥಿತವಾಗಿ ಬೆಳೆಯುವಂತೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಿದೆ. ಈ ರಾಜ್ಯದ ಸಂಘಟನೆ ಶಿಥಿಲಗೊಳ್ಳದಂತೆ ರಾಜಕೀಯ ಜನರು ಈ ರಾಜ್ಯದ ಭಟ್ಟಿಯನ್ನು ಕಾಯ್ದುಕೊಂಡು ಹೋಗಬೇಕು. ರಾಜ್ಯದ ಎಲ್ಲ ಪ್ರದೇಶಗಳನ್ನು ಸಮಾನ ಭಾವನೆಯಿಂದ ನೋಡಿಕೊಳ್ಳಬೇಕು. ತಮ್ಮನ್ನು ಉಪೇಕ್ಷಿಸಲಾಗಿದೆ ಎಂದು ಈ ರಾಜ್ಯದ ಯಾವ ಪ್ರದೇಶದ ಜನರಿಗೂ ಹೃದಯದ ಉರಿ ಉಂಟಾಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ. ಕುಟುಂಬದ ಯಜಮಾನನಲ್ಲಿ ಕುಟುಂಬ ಸದಸ್ಯರ ಬಗೆಗೆ ಪಕ್ಷಪಾತ ಭಾವನೆ ಇರಬಾರದು. ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವ್ಯತ್ಯಾಸ ಆಗದಂತೆ ನೋಡಿಕೊಳ್ಳುವುದು ಅಗತ್ಯವಿದೆ.

ಈ ರಾಜ್ಯದ ಜನರು, ದಕ್ಷಿಣ ಕರ್ನಾಟಕದಲ್ಲಿ ಇರಲಿ, ಅವರ ಆರೋಗ್ಯದ ಅವಶ್ಯಕತೆಗಳು ಒಂದೇ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ದಕ್ಷಿಣ ಕರ್ನಾಟಕದಲ್ಲಿ ಬಂದಂತೆ ಉತ್ತರ ಕರ್ನಾಟಕದಲ್ಲಿ ಬರುವುದು ಬೇಡವೆ? ನಿಮ್ಹಾನ್ಸ್ ಎಂಬ ಸಂಸ್ಥೆ ಬೆಂಗಳೂರಿನಲ್ಲಿ ಬಂದಂತೆ ಉತ್ತರ ಕರ್ನಾಟಕದಲ್ಲಿ ಏಕೆ ಬರುವುದಿಲ್ಲ? ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇಡಬಾರದೆಂದು ಹೇಳುತ್ತಾರೆ. ಅದೇ ರೀತಿ ಸೌಕರ್ಯಗಳನ್ನು ಕೂಡ ಸಮನಾಗಿ ಹಂಚಬೇಕು. ಶಿಕ್ಷಣದ ವಿಷಯದಲ್ಲಿ ಉದ್ದಿಮೆಗಳ ವಿಚಾರದಲ್ಲಿ ಬಹಳಷ್ಟು ಏರುಪೇರುಗಳು ಇವೆ. ರಾಜ್ಯದ ಯಾವ ಪ್ರದೇಶದ ಜನರೂ ತಮ್ಮ ಬೆಳವಣಿಗೆಯ ಅವಕಾಶಗಳಿಗೆ ವಂಚಿತರಾಗಬಾರದು. ಈ ರಾಜ್ಯದ ಒಂದು ಪ್ರದೇಶದ ಜನರಿಗೆ ಬೆಳವಣಿಗೆ ಅವಕಾಶಗಳಿಲ್ಲ. ಇನ್ನೊಂದು ಭಾಗದವರಿಗೆ ಎಲ್ಲವೂ ಉಂಟು. ಅವರು ಅವ್ವನ ಕೂಡ, ಅಪ್ಪನ ಕೂಡ ಇಬ್ಬರೊಂದಿಗೂ ಉಣ್ಣುತ್ತಾರೆ. ಆದರೆ ಮತ್ತೊಬ್ಬರಿಗೆ ಆ ಅವಕಾಶವೇ ಇಲ್ಲ.

ಇಲ್ಲಿಯವರೆಗೆ ಈ ರಾಜ್ಯದಲ್ಲಿ ಅಸಮಾನತೆ ಉಳಿದಿರುವುದು ಒಂದು ದುಃಸ್ವಪ್ನ. ಅದು ಕಳೆದುಹೋಗುವಂತೆ ನಾವು ಕ್ರಮಗಳನ್ನು ಕೈಗೊಂಡರೆ ನಮ್ಮ ನಾಳೆಗಳೆಲ್ಲ ಸುಂದರವಾಗುತ್ತವೆ.