ಅಧ್ಯಕ್ಷರೊಂದಿಗಿನ ಮಾತು....
5:16 PM
Posted by ಆಲೆಮನೆ
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನ ಇನ್ನೇನು ಕೆಲವೆ ಗಂಟೆಗಳಲ್ಲಿ "ನುಡಿನಮನದ" ಹಬ್ಬ ಸಾಹಿತ್ಯ ಸಮ್ಮೇಳನಕ್ಕಾಗಿ ಜಗ-ಮಗ ಸಿಂಗಾರಗೊಂಡು ಜನಸಾಗರದಲ್ಲಿ ತುಂಬಿ ತುಳಕಲಿದೆ. ನಲವತ್ತೊಂದು ವರ್ಷಗಳ ನಂತರ ಮತ್ತೆ ಬೆಂಗಳೂರಿನಲ್ಲಿ ಕನ್ನಡ ಜಾತ್ರೆಯ ತೇರನ್ನು ಎಳೆಯಲಾಗುತ್ತಿದೆ. ಎಪ್ಪತ್ತೇಳನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುತ್ತಿರುವವರು ಬೆಂಗಳೂರಿನಲ್ಲೇ ನೆಲೆಸಿರುವ, ನಿಘಂಟು ಸ್ಪೆಷಲಿಸ್ಟ್ ಎಂದೇ ಪ್ರಖ್ಯಾತರಾಗಿರುವ ಪ್ರೊ. ಜಿ. ವೆಂಕಟಸುಬ್ಬಯ್ಯನವರು. ವಯಸ್ಸು 98, ಆದರೆ ಪದಗಳ ಬಗ್ಗೆವಿಮರ್ಶೆ, ಸಾಹಿತ್ಯದ ಬಗೆಗಿನ ಅವರ ಉತ್ಸಾಹ 28ರದು. ಕುಗ್ಗದ ಹುಮ್ಮಸ್ಸಿಗ್ಗೊಂದು ಉದಾಹರಣೆ ಕಳೆದ ವರ್ಷ ಪ್ರಕಟಗೊಂಡ ಜಿ.ವಿ.ಯವರ ಹೊಸ ಹೊತ್ತಿಗೆ "ಕುಮಾರವ್ಯಾಸನ ಅಂತರಂಗ-ಯುದ್ಧ ಪಂಚಕದಲ್ಲಿ". ಒಂದು ಭಾಷೆಯ ಬೆಳವಣಿಗೆಗೆ ಪದಸಂಪತ್ತಿನ ಬೆಳವಣಿಗೆಯು ಅತಿಮುಖ್ಯ, ಇಂತಹ ಬೆಳವಣಿಗೆಯ ಸಂದರ್ಭದಲ್ಲಿ ಕನ್ನಡದಲ್ಲಿ ಹುಟ್ಟಿಕೊಂಡ ಪದಾರ್ಥಗಳ ಗೊಂದಲವನ್ನು ಸೂಕ್ತವಾಗಿ ವಿಶ್ಲೇಷಿಸಿ, ಅರ್ಥೈಸಲು ಶ್ರಮಪಟ್ಟವರಲ್ಲಿ ವೆಂಕಟಸುಬ್ಬಯ್ಯನವರು ಪ್ರಮುಖರು ಹಾಗೂ ಸತತ 18 ವರ್ಷಗಳ ಕಾಲ ಪ್ರತಿ ವಾರವೂ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಇವರ "ಇಗೋ ಕನ್ನಡ" ಅಂಕಣವು ಅತ್ಯಂತ ಜನಪ್ರಿಯವಾದದು. ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣವನ್ನು ಮಾಡಲು ಸಿದ್ಧತೆ ನಡೆಸುತ್ತಿರುವ ಜಿ.ವೆಂಕಟಸುಬ್ಬಯ್ಯ ನವರೊಂದಿಗಿನ ನೇರ ಮಾತುಕತೆ ಇಲ್ಲಿದೆ;
* ಸಾಹಿತ್ಯ ಸಮ್ಮೇಳನ ಅಂದ್ರೆ ಒಂದು ಸಂತೆ, ಜಾತ್ರೆ ಅಂತಾರೆ...., ಆದರೆ ನಿಮ್ಮ ಅಭಿಪ್ರಾಯದಲ್ಲಿ ಸಮ್ಮೇಳನ ಅಂದ್ರೇ.....?ಸಾಹಿತ್ಯವನ್ನು ರಚಿಸುವ ಸಾಹಿತಿಗಳ, ಅದನ್ನು ವಿಶ್ಲೇಷಿಸುವ-ವಿಮರ್ಷಿಸುವ ವಿದ್ಯಾವಂತರ, ತಿಳಿಯಲು ಹಾತೊರೆಯುವ ವಿದ್ಯಾರ್ತಿಗಳ, ಎಲ್ಲವನ್ನೂ ಆಸಕ್ತಿಯಿಂದ ನೋಡುವ, ಅನುಸರಿಸುವ ಯುವಕ-ಯುವತಿಯರು ಒಗ್ಗೂಡಲು ಸಾಹಿತ್ಯ ಸಂಸ್ಥೆಯೊಂದರಿಂದ ವಾರ್ಷಿಕವಾಗಿ ನಡೆಯುವ ಸಮಾವೇಶ ಈ ಸಾಹಿತ್ಯ ಸಮ್ಮೇಳನ. ಇಲ್ಲಿ ಎಲ್ಲರೂ ಎಲ್ಲರನ್ನೂ ಹತ್ತಿರದಿಂದ ಭೇಟಿಯಾಗುವ ಹಾಗೂ ಹೊಸತನ್ನು ಹಂಚಿಕೊಳ್ಳುವ ಅವಕಾಶ ಹೇರಳವಾಗಿರುತ್ತದೆ ಮತ್ತು ಬರವಣಿಗೆ ತಿಳಿಯಲಿ, ಬೆಳೆಯಲಿ ಎನ್ನುವುದು ಉದ್ದೇಶ. ಕೇವಲ ಊಟ-ಉಪಚಾರ, ಸಂಜೆಯ ಮನರಂಜನೆ ಇವಿಷ್ಟೇ ಸಮ್ಮೇಳನವಲ್ಲಾ. ಯುವಕರಿಗೆ ಮಾರ್ಗದರ್ಶನ ನೀಡಲು ಸೇರುವ ಹಿರಿಯರ ಕೂಟ ಇಲ್ಲಿ ಬಹಳ ಮುಖ್ಯವಾದದ್ದು.
* ಕನ್ನಡ ನಿಘಂಟನ್ನು ಹೊರತರಲ ಸ್ಪೂರ್ತಿ.....?ಇದು ಒಬ್ಬನಿಂದಾದ ಕೆಲಸವಲ್ಲ, ಇದರ ಮೂಲ ಪುರುಷರು ಎ.ಆರ್. ಕೃಷ್ಣಶಾಸ್ತ್ರಿಗಳು. ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾದಾಗ ಎಲ್ಲಾ ವಿದ್ವಾಂಸರು ಕೂಡಿ ಉದ್ದೇಶವನ್ನ ನಿಘಂಟಿನ ಅವಶ್ಯಕತೆಯನ್ನು ಸೂಚಿಸಲಾಯಿತು. ಆದರೆ 1943ರವರೆಗು ಹಳೆಗನ್ನಡದ 'ರಳ'ನಿಘಂಟು ಮಾತ್ರ ಪ್ರಕಟವಾಗಿತ್ತು. ಆನಂತರದಲ್ಲಿ ವಿದ್ಯಾಥರ್ಿಯಾಗಿದ್ದಾಗಿನಿಂದ ಪದಗಳ ಸಂಗ್ರಹದ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ, ಮುಂದೆ 1964ರಲ್ಲಿ ಪರಿಷತ್ತಿನ ಅಧ್ಯಕ್ಷನಾದಾಗ ಕೃಷ್ಣಶಾಸ್ತ್ರಿಗಳ ಸೂಕ್ತ ಮಾರ್ಗದರ್ಶನದಿಂದ ಹೆಚ್ಚಿನ ಕೆಲಸಗಳು ಸಾಗಿದವು.
* ಇಂದಿನ ಇಂಗ್ಲೀಷ್ ಪ್ರಭಾವದ ನಡುವೆ ಕನ್ನಡವನ್ನು ಬೆಳೆಸೋಕೆ ಇರೋ ಮಾರ್ಗ.....?ಮುಖ್ಯವಾಗಿ ಕನ್ನಡದ ಬರಹಗಳು ಹೆಚ್ಚಾಗಬೇಕು, ಬಳಸದೇ ಉಳಿದ ಶಬ್ಧಗಳು ಹೊರಬಂದು ಜನರನ್ನು ತಲುಪಬೇಕು. ಒಂದು ಭಾಷೆ ಬೆಳೆಯುವಾಗ ಅದು ತನ್ನ ಸುತ್ತಮುತ್ತಲಿನಿಂದ ಪದಗಳನ್ನು ಎರವಲು ಪಡೆಯಬೇಕಾದದು ಅನಿವಾರ್ಯವಾಗುತ್ತದೆ, ಹೀಗೆಯೇ ಕನ್ನಡವು ಇಂಗ್ಲೀಷ್ ನಡುವೆ ಬೆಳೆಯುತ್ತಿದೆ.
* ಆಡಳಿತದಲ್ಲಿ ಕನ್ನಡ ಇನ್ನೂ ಸಾಧ್ಯವಾಗಿಲ್ಲವೇಕೆ....?ಅರಾಬಿಕ್, ಪಷರ್ಿಯನ್ ಭಾಷೆಗಳಿಂದ ಕನ್ನಡದಲ್ಲಿ ಸಾಕಷ್ಟು ಆಡಳಿತಕ್ಕೆ ಅನುಗುಣವಾಗುವ ಪದಗಳಿವೆ, ಆದರೆ ಸಕರ್ಾರ ಅದನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕು. ಕನ್ನಡದಲ್ಲಿ ಬರೆಯಲಾಗದಿರುವವರನ್ನು, ವ್ಯವಹರಿಸಲಾಗದವರನ್ನು ಕೆಲಸದಿಂದ ವಜಾಗೊಳಿಸುವಂತಹ ಕಠಿಣ ಕ್ರಮವನ್ನು ಕೈಗೊಳ್ಳುವುದರಿಂದ ಆಡಳಿತ ತಾನಾಗಿಯೇ ಕನ್ನಡದಲ್ಲಿ ನಡೆಯುತ್ತದೆ. ಈ ಮೂಲಕವೇ ಹಿಂದಿ ಮತ್ತು ತಮಿಳಿನಲ್ಲಿ ಆಡಳಿತವು ಸರಾಗವಾಗಿ ಸಾಗುವುದರ ಜೊತೆಗೆ ಭಾಷೆಯು ಬೆಳೆಯುತ್ತಿದೆ. ತಾಂತ್ರಿಕ ಪದಗಳಿಗೆ ಪರಿಭಾಷೆಯ ಮೂಲಕ ಅಂದರೆ, ಬೇರೆ ಭಾಷೆಯಿಂದ ತೆಗೆದುಕೊಂಡ ಪದಗಳಿಗೆ ತದ್ಭವ ರೂಪವನ್ನು ನೀಡುವುದರ ಮೂಲಕವೂ ಪದಸಂಪತ್ತು ಹೆಚ್ಚುತ್ತಿದೆ.
* ಬದುಕು ಮತ್ತು ಭಾಷೆಯಲ್ಲಿ ಯಾವುದು ದೊಡ್ಡದು ಮತ್ತು ಮುಖ್ಯ.....?ಎರಡೂ ಬಹಳ ಮುಖ್ಯ. ಜನ ಬದುಕಲು ಸ್ನೇಹ ಬೆಳಿಯಬೇಕು, ಸ್ನೇಹದಿಂದ ಮಾತು ಬೆಳೆಯುತ್ತದೆ, ಭಾಷೆ ಬದುಕಿಗೆ ಅವಶ್ಯಕವಾದುದು, ಭಾಷೆಯಿಲ್ಲದೆ ಮನುಷ್ಯಯಿಲ್ಲ. ಶಾಲಾಕಾಲೇಜುಗಳಲ್ಲಿ, ಮನೆಗಳಲ್ಲಿ, ಕಛೇರಿಗಳಲ್ಲಿ, ವ್ಯವಹಾರದಲ್ಲಿ ಕನ್ನಡವನ್ನು ಬಳಸಿದರೆ ಬದುಕಿನೊಂದಿಗೆ ಭಾಷೆ ಬೆಳೆಯುತ್ತೆ. ಇದನ್ನೆಲ್ಲಾ ಹಠಯಿಡಿದು ಮಾಡಿಸುವಂತ ಸರಕಾರ ನಮಗೆ ಬೇಕಾಗಿದೆ.
* ಜಗತ್ತಿನಲ್ಲಿ ಸಾವಿನ ಅಂಚಿನಲ್ಲಿರುವ 100 ಭಾಷೆಗಳಲ್ಲಿ ಕನ್ನಡವೂ ಒಂದು ಅನ್ನುತ್ತಾರೆ....ನಿಜವಾ....?ಆ ಸಾಲಿಗೆ ಕನ್ನಡವನ್ನು ಯಾರು ಸೇರಿಸಿದರೋ ಗೊತ್ತಿಲ್ಲ, ಆದರೆ ಸಂವೃದ್ಧವಾಗಿರುವ ಕನ್ನಡ ಸಾಯುವುದು ಅಷ್ಟು ಸುಲಭದ ಮಾತಲ್ಲ, ಕನ್ನಡದ ನಡುವೆ ಇಂಗ್ಲೀಷ್ ಹೆಚ್ಚುತ್ತಿದೆ ಎಂದು ಬೇಕಾದರೆ ಹೇಳಬಹುದು.
* ಸಿಕ್ಕಿರುವ ಶಾಸ್ತ್ರೀಯ ಸ್ಥಾನಮಾನವನ್ನು ಬಳಸಿಕೊಳ್ಳೋದು ಹೇಗೆ....?ಒಂದು ವಿದ್ವಾಂಸರ ಸಮಿತಿ ರಚಿಸಿ ಕನ್ನಡದಲ್ಲಿ ಆಗಬೇಕಾದ ಕೆಲಸಗಳ ಬಗೆಗೆ ಸಮಗ್ರ ಯೋಜನೆಗಳನ್ನು ನಿಮರ್ಿಸಿ, ಅದರ ಪ್ರಸ್ತಾವನೆಯನ್ನು ಕೇಂದ್ರದ ಮುಂದಿಟ್ಟು, ಅವಶ್ಯಕವಾಗಿ ಇದಕ್ಕೆಲ್ಲಾ ಹಣಬೇಕಾಗಿದೆ ಎಂದು ಪಟ್ಟು ಹಿಡಿದು ಕನ್ನಡದ ಕೆಲಸಗಳನ್ನು ಪ್ರಾರಂಭಿಸಬೇಕಾಗಿದೆ. ತಮಿಳು ನಾಡಿಗೆ ಈಗಾಗಲೇ ಸುಮಾರು 30 ಕೋಟಿಯಷ್ಟು ಅನುದಾನ ಬಿಡುಗಡೆಯಾಗಿದೆ. ಆದರೆ, ನಮ್ಮಲ್ಲಿ ಯೋಜನೆಗಳನ್ನು ರೂಪಿಸುವವರೇ ಇಲ್ಲದಂತಾಗಿದೆ.
* ಆಂಧ್ರದ ತೆಲಂಗಾಣದಂತೆ ನಮ್ಮಲ್ಲೂ ಉತ್ತರ ಕನರ್ಾಟಕ ಮತ್ತು ಕೊಡಗು ಜಿಲ್ಲೆಗಳು ಸ್ವತಂತ್ರ ರಾಜ್ಯದ ಕೂಗೆದ್ದಿದೆ, ಇದರ ಉದ್ದೇಶ ಏನು....?ಹಿಂದೆ ಇಡೀ ಭಾರತ ದೇಶದಲ್ಲಿ ಛಿದ್ರ-ಛಿದ್ರವಾಗಿ ಹೋಗಿದ್ದ ನಮ್ಮ ನಾಡು ಬಹಳ ಕಷ್ಟಗಳನ್ನು ಎದುರಿಸಿ ಏಕೀಕರಣದಿಂದಾಗಿ ಒಂದಾಗಿದೆ. ಈಗ ಮತ್ತೇ ಬೇರೆಯಾಗುವ ಮಾತು ದೂರವೇ ಸರಿ. ಆ ಜಿಲ್ಲೆಗಳಲ್ಲಿನ ಇಂತಹ ಹೋರಾಟಕ್ಕೆ ಮುಖ್ಯ ಕಾರಣ, ಅಲ್ಲಿನ ಅಭಿವೃದ್ಧಿಗಾಗಿ ಸರಿಯಾಗಿ ಹಣವಿನಿಯೋಗ ಆಗುತ್ತಿಲ್ಲ ಎನ್ನುವುದು. ಆದರೆ ಎಲ್ಲಾ ಜಿಲ್ಲೆಗಳಿಗೂ ಹಣವನ್ನು ಸರಿಯಾಗಿಯೇ ಹಂಚಲಾಗಿರುತ್ತದೆ, ಆ ಹಣವು ಸಾಲದೆಂಬುದೇ ಈ ಕೂಗಿಗೆ ಕಾರಣವಾದರೂ ಅವರ ಮನಸ್ಸುಗಳಲ್ಲಿ ದೂರವಾಗುವ ಯೋಚನೆ ಖಂಡಿತಾಯಿಲ್ಲಾ.
* ಇಲ್ಲಿ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆಯಾ....?ಹಿಂದೆ ಹೊಟ್ಟೆ ಪಕ್ಷವೆಂಬ ಪಕ್ಷ ಕನರ್ಾಟಕದಲ್ಲಿತ್ತು ಎನ್ನುವುದು ಈಗ ಇತಿಹಾಸ, ಪ್ರಾದೇಶಿಕ ಪಕ್ಷಗಳು ಇಂತಹ ಸ್ಥಿತಿಯನ್ನು ತಲುಪುವುದಾದರೆ ಅದು ಅನವಶ್ಯಕ. ಇರುವ ಪಕ್ಷಗಳಲ್ಲೇ ವಿವಿಧ ಭಾಗದ ಜನರು ಸೇರುತ್ತಾರೆ, ಅಲ್ಲೇ ಸರಿಯಾದ ಹೋರಾಟ ನಡೆಸಿದರೆ ಸಾಕು.
* ಕನ್ನಡದಲ್ಲಿ ಇಂಗ್ಲೀಷ್ ಪದಗಳು ಇರುವ ಹಾಗೇ ಸಂಸ್ಕೃತದ ಪದಗಳು ಸೇರಿವೆ, ಇದರ ಬಳಕೆಯ ಬಗ್ಗೆ ಶಂಕರಭಟ್ಟರು ಮಾಡಿದ ತರ್ಕವನ್ನು ಒಪ್ಪಬಹುದಾ.....?ಅವರ ಪ್ರಕಾರ ಪದಗಳಲ್ಲಿನ ಮಹಾಪ್ರಾಣವನ್ನು ಬಿಟ್ಟು ಉಪಯೋಗಿಸುವುದು. ಇಂತಹ ಪದಗಳು ಈಗಾಗಲೇ ಸಾಕಷ್ಟಿವೆ, ನಾವು ಬಳಸುವ 100 ಪದಗಳಲ್ಲಿ ಶೇಕಡ 50 ಪದಗಳು ಸಂಸ್ಕೃತದಿಂದ ಬಂದದ್ದಾಗಿದ್ದು ಆ ಪದಗಳು ಬೇಡವೆಂದರೆ ಕನ್ನಡ ಪದ ಸಂಪತ್ತು ಇಳಿಮುಖಗೊಳ್ಳುತ್ತದೆ.
* ಕನ್ನಡ ಚಳುವಳಿಗಳು ಈಗ ಬೇಕಾ...?ಕನ್ನಡ ಭಾಷಾ ಪ್ರೇಮಿಗಳಲ್ಲಿ ಯಾವುದೇ ಆಥರ್ಿಕ ಸಹಾಯವೂ ಇಲ್ಲದೆ ಬೆಳೆದು ಬಂದದ್ದು ಕನ್ನಡ ಚಳುವಳಿಗಳು. ಕನ್ನಡವನ್ನು ಆಡಲು, ಬೆಳೆಸಲು ಚಳುವಳಿಗಳು ಇರಲೇ ಬೇಕು. ಆದರೆ, ಇಂದು ನಡೆಸುತ್ತಿರುವ ಉತ್ಸವಗಳಿಂದಾಗಿ ಕನ್ನಡ ಉಳಿಯೋದು, ಬೆಳೆಯೋದು ಸಾಧ್ಯವಿಲ್ಲ. ಇವೆಲ್ಲಾ ಒಂದು ಪ್ರಚಾರ ಕ್ರಿಯೆಯಂತೆ ತೋರುತ್ತದೆ, ಅದು ಪ್ರಚಾರಕ್ಕೆ ಇರಲಿ. ಆದರೆ, ಸಕರ್ಾರ ಮತ್ತು ಸಾಹಿತಿಗಳು ಕನ್ನಡದ ಬಗೆಗೆ ಸಮಾಲೋಚಿಸಬೇಕು.
* ಲಕ್ಷ ಸಂಪಾದಿಸುವ ಇಂಗ್ಲೀಷ್ ಕೆಲಸಗಳ ನಡುವೆ ಕನ್ನಡದ ಬೆಳವಣಿಗೆ,,,,?ಮುಖ್ಯವಾಗಿ ಇದು ಉದ್ಯಮ ಪತಿಗಳ ಮೇಲೆ ನಿಂತಿದೆ. ಕೆಲಸದಲ್ಲಿ ಕನ್ನಡಿಗರಿಗೆ ಸರಿಯಾದ ಅವಕಾಶಗಳನ್ನು ನೀಡುವುದರಿಂದ ಹಿಡಿದು ಕೆಲಸದಲ್ಲಿರುವ ಇತರರಿಗೂ ಕನ್ನಡವನ್ನು ಕಲಿಸುವ ಕರ್ತವ್ಯವನ್ನು ಕೈಗೊಳ್ಳಬೇಕು.
* ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳು ಅಂಗೀಕಾರವಾಗುತ್ತೆ ಆಗುತ್ತೆ...ಆದರೂ ಕೆಲಸ ಆಗೋದಿಲ್ಲ. ನಿಮ್ಮ ಭಾಷಣದಲ್ಲಿ ಇಂತಹ ನಿರ್ಣಯಗಳು ಇವೆಯಾ....?ನಾನು ಈ ಬಾರಿ ಯಾವುದೇ ಹೊಸ ನಿರ್ಣಯವನ್ನೂ ಸಭೆಯ ಮುಂದೆ ಇಡುತ್ತಿಲ್ಲ. ಇದೂವರೆಗೂ ತೆಗೆದುಕೊಂಡಿರುವಂತಹ ನಿರ್ಣಯಗಳಲ್ಲಿ ಮುಖ್ಯವಾದದನ್ನು ಪಟ್ಟಿ ಮಾಡಿ ಭಾಷಣ ಮಾಡಲಿದ್ದೀನಿ, ಈ ಎಲ್ಲಾ ನಿರ್ಣಯಗಳೂ ಅನುಷ್ಟಾನಗೊಂಡರೆ ಸಾಕು ಕನ್ನಡ ನಿಜಕ್ಕೂ ಉದ್ಧಾರವಾದಂತೆಯೇ....ಆದ್ದರಿಂದ ಇಲ್ಲಿ ಹೊಸದು ಏನೂ ಬೇಕಿಲ್ಲ.
* ಇಂದಿನ ಸಾಹಿತ್ಯಲೋಕ ಹೇಗಿದೆ....?ನಾನು ನೋಡುತ್ತಾ ಬಂದಂತೆ ಹಿಂದಿನ ಹತ್ತು ವರ್ಷಕ್ಕೂ, ಇಂದಿನ ಸಾಹಿತ್ಯಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ, ಈಗ ಹೊಸದೊಂದು ಶೈಲಿ ಬೆಳೆಯುತ್ತಿದೆ. ನಿಜಕ್ಕೂ ಇಂದಿನ ಸಾಹಿತ್ಯ ಶ್ರೀಮಂತವಾಗುತ್ತಾ ಸಾಗುತ್ತಿದೆ ಮತ್ತು ಮುಂದಿನ ಶತಮಾನಕ್ಕೆ ಆಶಾದಾಯಕವಾಗಿದೆ.
* ಇಂದಿನ ಮಾಧ್ಯಮಗಳಲ್ಲಿ ಕನ್ನಡದ ಬಳಕೆ ಹೇಗಿದೆ....?ಸುದ್ಧಿ ಮಾಧ್ಯಮಗಳು ಹಾಗೂ ಇತರೆ ಪತ್ರಿಕೆಗಳು ಹೊಸ ಪದಗಳನ್ನು ಆವಿಷ್ಕರಿಸುತ್ತಾ ಸಾಗಿರುವುದು ಸಂತಸದ ವಿಷಯ, ಆದರೆ ಎಫ್.ಎಂ. ಚಾನೆಲ್ಗಳು ಹಾಗೂ ಕೆಲವು ಧಾರಾವಾಹಿಗಳು ಬಳಸುತ್ತಿರುವ ಭಾಷೆ ಅತ್ಯಂತ ಕೆಟ್ಟದಾಗಿದೆ, ಅದು ಕನ್ನಡವೂ ಅಲ್ಲಾ ಇಂಗ್ಲೀಷೂ ಅಲ್ಲ. ಇದರಿಂದ ಭಾಷೆ ಅಶುದ್ಧವಾಗುತ್ತಿದೆ ಇದನ್ನು ತಪ್ಪಿಸಲು ನಿದರ್ೇಶಕರುಗಳು ಸೂಕ್ತವಾದ ಮಾರ್ಗದರ್ಶನದೊಂದಿಗೆ ಸಾಗಬೇಕಾಗಿರುವುದು ಅವಶ್ಯಕವಾಗಿದೆ.
* ನಿಮ್ಮ ದಿನಚರಿ.... ಮುಂಜಾನೆ 4;30ಕ್ಕೆ ಎದ್ದು ಕಾಫಿ ಕುಡಿದು ವಾಕಿಂಗ್ ಮುಗಿಸಿ ಬಂದ ನಂತರ ಸ್ನಾನ. ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಓದು ಹಾಗೂ ಬರವಣಿಗೆ, ಊಟದ ನಂತರ ಮನೆಯವರೊಂದಿಗೆ ಮಾತುಕತೆಯಲ್ಲಿ ತೊಡಗುವುದು. ಮಧ್ಯಾಹ್ನದ ವೇಳೆ ನಿದ್ರೆ ಮಾಡುವ ಅಭ್ಯಾಸವಿಲ್ಲ. ಸಂಜೆ 4 ರಿಂದ 6ರವರೆಗೆ ಸಂದರ್ಶನದ ವೇಳೆ, ಉಳಿದ ಕಾಲದಲ್ಲಿ ಓದು, ಬರವಣಿಗೆಯಲ್ಲಿ ತೋಚಿದ ಕೆಲಸಗಳನ್ನು ಮಾಡುತ್ತ ರಾತ್ರಿ 9:30ರ ವೇಳೆಗೆ ನಿದ್ರೆಗೆ ಜಾರುವುದು. ಅನ್ನ-ಸಾರು, ತಿಳಿ ಮಜ್ಜಿಗೆ ದಿನದ ಆಹಾರ, ಬೆಳೆಗ್ಗೆ ಸ್ವಲ್ಪ ತರಕಾರಿ ಹಾಗೂ ದಿನಕ್ಕೆ ಯಾವುದಾದರು ಒಂದು ಹಣ್ಣು ಇವಿಷ್ಟೇ ದೇಹಕ್ಕೆ.
* ಸಾಹಿತ್ಯದ ಜೊತೆಗಿನ ಇತರೆ ಕೆಲಸಗಳು...?ಸುಮಾರು ಐವತ್ತು ವರ್ಷಗಳಿಂದ ಬೆಂಗಳೂರಿನ "ರಾಮಕೃಷ್ಣ ಸ್ಟೂಡೆಂಟ್ಸ್ ಹೋಂ"ನ ಜೊತೆಗಿನ ಒಡನಾಟವಿದೆ ಹಾಗೂ 30 ವರ್ಷಗಳಿಂದ ಅಲ್ಲಿನ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.
ನಾಳಿನ ಅಧ್ಯಕ್ಷೀಯ ಭಾಷಣಕ್ಕಾಗಿ ಎಲ್ಲರ ಕಾತರ.......

This entry was posted on October 4, 2009 at 12:14 pm, and is filed under
. Follow any responses to this post through RSS. You can leave a response, or trackback from your own site.
Subscribe to:
Post Comments (Atom)
Post a Comment