ಸಾಹಿತ್ಯ ಸಮ್ಮೇಳನದ ಮೇನ್ ಪ್ರೋಗ್ರಾಮ್ ಊಟಕ್ಕೆ ಭರ್ಜರಿ ತಯಾರಿ ನಡೆದಿದ! ಹೌದು ರೀ ಇದಾ ಮೇನ್ ಪ್ರೋಗ್ರಾಮ್ ಬಂದ ಜನ ತ್ರುಪ್ತರಾಗೋದು ಭೋಜನದಲ್ಲೇ, ಗದ್ದಳಗಲಾಗೋದು ಈ ರಸಗವಳ ಹೊಟ್ಟೆ ಸೇರದಿದ್ದಾಗಲೇ. ಊಟ ಏನೋ ಸಾಕಷ್ಟು ತಯಾರಾದ ಅದಾರೂ ಗದ್ದಲ ಆದರೆ ಅದು ಅದರ ವಿತರಣೆಯಲ್ಲೇ. ಗದಗಕ್ಕೆ ಬಂದವರೆಲ್ಲರಿಗೂ ಉತ್ತರ ಕರ್ನಾಟಕದ ಅಗ್ದೀ ಸ್ಪೆಷಲ್ ಊಟ ತಯಾರಿದೆ. ಮೆನು ಹೇಳಿದರೆನೆ ಬಾಯಲ್ಲಿ ನೀರೂರತ್ತದ! ಹಾಗಿದೆ ಮೆನು.....
ಗದುಗಿನ ಸುತ್ತಮುತ್ತಲ ಊರುಗಳ ರೈತರು ಗದುಗಿನ ಆತಿಥ್ಯಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ. ಸ್ವಯಂ ಪ್ರೇರಣೆಯಿಂದ ಖಡಕ್ ರೊಟ್ಟಿಗಳನ್ನು ತಂದು ಗದಗದ ಗೋದಾಮುಗಳಲ್ಲಿ ತುಂಬಿದ್ದಾರೆ. ಅಲ್ಲದೆ ನಾಲ್ಕು ಜನ ಗದುಗಿನ ಶಾಸಕರು ಒಬ್ಬೊಬ್ಬರು ೧ ಲಾಖ್ ರೊಟ್ಟಿಗಳನ್ನು ಮಾಡಿಸಿಟ್ಟಿದ್ದಾರೆ. ಇದಕ್ಕೆ ಕ್ವಿಂಟಾಲ್ ಗಟ್ಟಲೆ ಚಟ್ನಿಪುಡಿ ಕೂಡ ರೆಡಿ ಅದ. ಅದಕ್ಕೆ ತಕ್ಕಂತೆ ಬದನೇಕಾಯಿ ಪಲ್ಲೆ ಎಲ್ಲ ತಯಾರದ.
ಬರೀ ಖಾರ ಅಲ್ಲರೀ ಊಟದ ಮೆನುನಲ್ಲಿ ಸಿಹಿ ತಿಂಡಿಗಳ ಸವಾರಿಯೇ ನಡೆದಿದೆ. ಮುಖ್ಯವಾಗಿ ಗದುಗಿನ ವಿಶೇಷ ತಿನಿಸುಗಳು - ಶೇಂಗಾ ಒಬ್ಬಟ್ಟು ಮತ್ತು ಗೋಧಿ ಹುಗ್ಗಿ. ಇದಲ್ಲದೆ ಜಿಲೇಬಿ, ಮೈಸೂರ್ ಪಾಕ್, ಬಾದುಶ, ಶಿರಾ......