ಇವರಿಲ್ಲದಿರೆ ಆಲೆಮನೆ ನುಡಿನಮನವಿಲ್ಲ.....!
11:31 AM
Posted by ಆಲೆಮನೆ
ಹೌದು ಇವರಿಲ್ಲದಿದ್ದರೆ ನಮ್ಮ ಆಲೆಮನೆ ತಂಡ ಗದುಗಿನಲ್ಲಿ ಪಡಬಾರದ ಕಷ್ಟ ಪಡಬೇಕಿತ್ತು. ಇವರ ಹೆಸರು ಸಿದ್ದು ಯಾಪಲಪರವಿ. ಗದುಗಿನಲ್ಲಿ ಇಂಗ್ಲೀಷ್ ಪ್ರೊಫೆಸ್ಸರ್. ಆದರೆ ಸಾಹಿತ್ಯ ಕೃಷಿ ಕನ್ನಡದಲ್ಲಿ. ನಾನು ವಿಕ್ರಾಂತ ಕರ್ನಾಟಕಕ್ಕೆ ಬರೆಯುತ್ತಿದ್ದ ಕಾಲಕ್ಕೆ ಸಣ್ಣ ಪರಿಚಯವಾಗಿದ್ದ ನಮ್ಮಿಬ್ಬರ ಸ್ನೇಹ ಗದುಗಿನ ಟ್ರಿಪ್ ಆದಮೇಲೆ ಆತ್ಮೀಯತೆಗೆ ಬೆಳೆದಿದೆ. ನಾವು ಹೋಗುವಷ್ಟರಲ್ಲಿ ನಮ್ಮ ತಂಡಕ್ಕೆ, ಎರಡು ರೂಮು, ಓಡಾಡಲಿಕ್ಕೆ ಒಂದು ಗಾಡಿ, ಊಟ, ಮಾಧ್ಯಮ ಕೇಂದ್ರದ ವ್ಯವಸ್ಥೆ ಎಲ್ಲವನ್ನೂ ಮಾಡಿಕೊಟ್ಟು ಮನೆಯ ಅಥಿತಿಗಳಂತೆ ನಮ್ಮನ್ನು ನೋಡಿಕೊಂಡ ಗದುಗಿನ ನಮ್ಮ ಗಾಡ್ ಫಾದರ್ - ಸಿದ್ದು ಯಾಪಲಪರವಿ ಸಾಹೇಬರು!
ತುಂಬಾನೇ ಥ್ಯಾಂಕ್ಸು ಸಾರ್!
ಸಮ್ಮೇಳನದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿ, ಮನೆಯ ಹಬ್ಬದಂತೆ ಪಾಲ್ಗೊಂಡವರು ಸಿದ್ದು ಯಾಪಲಪರವಿ ಅವರು. ಸಮ್ಮೇಳನದ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳ ನಿರೂಪಣೆ ಸಿದ್ದು ಅವರದೇ. ಎಲ್ಲೂ ಬೋರಾಗದಂತೆ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬರುವಂತೆ ನಡೆಸಿಕೊಟ್ಟಿದಕ್ಕೆ ಅಭಿನಂದನೆಗಳು.
- ಆದಿತ್ಯ
This entry was posted on October 4, 2009 at 12:14 pm, and is filed under
. Follow any responses to this post through RSS. You can leave a response, or trackback from your own site.
Subscribe to:
Post Comments (Atom)
March 12, 2010 at 6:15 PM
nanna mele torida preetigagi thanks alot