೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯಗಳು


ನಿರ್ಣಯ 1:
ಇದುವರೆಗೂ ನಡೆದ 76 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳು ಕಾರ್ಯರೂಪಕ್ಕೆ ಬಂದಿಲ್ಲ. ಈಗಲಾದರೂ ಆ ನಿರ್ಣಯಗಳು ಕಾರ್ಯರೂಪಕ್ಕೆ ತರಲು ಸರ್ಕಾರ ಕ್ರಿಯಾಶೀಲವಾಗಿ ಸಹಕರಿಸಬೇಕು.


ನಿರ್ಣಯ 2:
ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತುಗಳಿಗೆ ಆಯಾ ನಗರದ ಕೇಂದ್ರ ಭಾಗದಲ್ಲಿ ಉಚಿತ ನಿವೇಶನ ಮತ್ತು ಸಾಹಿತ್ಯ ಭವನ ನಿರ್ಮಾಣಕ್ಕೆ ಸರ್ಕಾರ ಆರ್ಥಿಕ ನೆರವನ್ನು ಮಂಜೂರುಗೊಳಿಸಬೇಕು.


ನಿರ್ಣಯ 3:
ಪ್ರಾಥಮಿಕ ಹಂತದ ಶಿಕ್ಷಣ 1ರಿಂದ ನಾಲ್ಕನೇ ತರಗತಿಗೆ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೇಂದ್ರೀಯ ವಿದ್ಯಾಲಯದಲ್ಲಿ ವಿದ್ಯಾಭ್ಯಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತ್ರಿಭಾಷಾ ಸೂತ್ರದಂತೆ ನ್ಯಾಯಾಲಯದ ತೀರ್ಪಿನಂತೆ ಕನ್ನಡ ಭಾಷೆ ಕಡ್ಡಾಯವಾಗಿ ಒಂದು ವಿಷಯವಾಗಿ ಕಲಿಸಲು ಸಮ್ಮೇಳನ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ ಒತ್ತಾಯಿಸುತ್ತದೆ.


ನಿರ್ಣಯ 4:
ನಾಲ್ಕು ದಶಕದಿಂದ ದೂರ ಉಳಿದಿದ್ದ ಡಬ್ಬಿಂಗ್ ಸಂಸ್ಕೃತಿಯನ್ನು ಮತ್ತೆ ಕನ್ನಡ ಚಿತ್ರರಂಗಕ್ಕೆ ತರುವ  ಪ್ರಯತ್ನ ನಡೆದಿರುವದನ್ನು ಸಮ್ಮೇಳನ ವಿರೋಧಿಸುತ್ತದೆ. ಭಾಷೆ ಮತ್ತು ಸಂಸ್ಕೃತಿಗೆ ಮಾರಕವಾದ ಡಬ್ಬಿಂಗ್ ಚಿತ್ರ ನಿರ್ಮಾಣಕ್ಕೆ ಸರ್ಕಾರ ಅವಕಾಶ ನೀಡಬಾರದು ಎಂದು ಸಮ್ಮೇಳನ ಒತ್ತಾಯಿಸುತ್ತದೆ.


ನಿರ್ಣಯ 5:
ಪ್ರತಿ ವರ್ಷ ನೀಡುತ್ತಿರುವ ಪಂಪ ಪ್ರಶಸ್ತಿಯನ್ನು ಪಂಪನ ಜನ್ಮ ಸ್ಥಳವಾದ ಗದಗ್ ಜಿಲ್ಲೆಯ ಅಣ್ಣಿಗೇರಿಯಲ್ಲೇ ನೀಡಬೇಕು ಎಂದು ಸಮ್ಮೇಳನ ಸರ್ಕಾರವನ್ನು ಒತ್ತಾಯಿಸುತ್ತದೆ.


ನಿರ್ಣಯ 6:
ಡಾ|| ಎಂ ಚಿದಾನಂದ ಮೂರ್ತಿಯವರಿಗೆ ಡಾಕ್ಟರೇಟ್ ಪದವಿಯನ್ನು ನೀಡುವ ಸಲುವಾಗಿ ಉಂಟಾದ ವಿದ್ಯಮಾನ ಕನ್ನಡ ಸಾರಸ್ವತ ಲೋಕಕ್ಕೆ ಅಪಮಾನ ಉಂಟು ಮಾಡಿದೆ. ಇದನ್ನು ಸಮ್ಮೇಳನ ಒಕ್ಕೊರಲಿನಿಂದ ಖಂಡಿಸುತ್ತದೆ.


ನಿರ್ಣಯ 7:
ಹೈದರಾಬಾದ - ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ ಮುನ್ನೂರ ಎಪ್ಪತ್ತೊಂದನೆಯ ಕಾಯಿದೆಯನ್ನು ಅಭಿವೃದ್ಧಿ ದೃಷ್ಟಿಯಿಂದ ಅನುಷ್ಠಾನಗೊಳಿಸಬೇಕು ಎಂದು ಸಮ್ಮೇಳನ ಒತ್ತಾಯಿಸುತ್ತದೆ.


ನಿರ್ಣಯ 8:
ಅನ್ಯಭಾಷಿಕರು ಜೀವನಕ್ಕಾಗಿ ಬೆಂಗಳೂರು ಮತ್ತು ರಾಜ್ಯದ ವಿವಿಧ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಅವರು ಕಡ್ಡಾಯವಾಗಿ ಕನ್ನಡವನ್ನು ಕಲಿತು ವ್ಯಾವಹಾರಿಕ ದೃಷ್ಟಿಯಲ್ಲಿ ಕನ್ನಡ ಭಾಷೆಯನ್ನು ಆಡಬೇಕೆಂದು ಸಮ್ಮೇಳನ ಅನ್ಯಭಾಷಿಕರಿಗೆ ಕರೆ ನೀಡುತ್ತದೆ.


ನಿರ್ಣಯ 9:
77ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಕೊಟ್ಟ ಎಲ್ಲರಿಗೂ ಈ ಮಹಾ ಸಭೆ ಅಭಿನಂದಿಸುತ್ತದೆ.