ಮಾಧ್ಯಮ ಕೇಂದ್ರದ ಮೇಷ್ಟ್ರು......

ಸದಾ ಸಿಡಿಮಿಡಿಗೊಳ್ಳುವ ಸತೀಶ್, ಸಮ್ಮೇಳನದ ಮಾಧ್ಯಮ ಕೇಂದ್ರದ ಸೂಪರ್ವೈಸರ್.
ಉತ್ಸಾಹಿ ವಿದ್ಯಾರ್ಥಿಗಳ ಬಗೆಗೆ ಇವರಿಗೇಕೋ ಅಸಡ್ಡೆ. ಸದಾ ಒಂದಿಲ್ಲೊಂದು ವಿಷಯಕ್ಕೆ ತಕರಾರೆತ್ತುವುದು ಇವರ ಹವ್ಯಾಸವೆನಿಸಿತ್ತು.
ಏಕೋ ಇವರು ಒಂದನ್ನು ಮರೆತಂತಿದೆ, ನಾವೆಲ್ಲರೂ ಮಾಡುತ್ತಿರುವುದು ಕನ್ನಡದ ಕೆಲಸ,
ಯಾರನ್ನೂ ಹಗುರೆಣಿಸಬೇಡಿ...
ಇನ್ನು ಮುಂದಾದರೂ ಯುವಸಮುದಾಯಕ್ಕೆ ತಮ್ಮ ಅಪೂರ್ವ ಮಾರ್ಗದರ್ಶನವನ್ನು ನೀಡಿ ಅವರನ್ನು ಹುರಿದುಂಬಿಸಿ.

ಇದೆಲ್ಲವನ್ನು ಮೀರಿ ನಿಮಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.

ತುಂಬಾನೆ ಥ್ಯಾಂಕ್ಸು ಸಾರ್.

ಇಂತಿ ನಿಮ್ಮ ನೆಚ್ಚಿನ
ಆಲೆಮನೆಯ ಇರುವೆಗಳು.

ಚಿಂತನಾ ಮಗ್ನರು....





ಇನ್ನು ಇವುಗಳದ್ದೇ ಕಾರು ಬಾರು....



ಸಾಹಿತ್ಯ-ಸಾಂಸ್ಕೃತಿಕ ಸುಗ್ಗಿ ಮುಗಿದ ನಂತರ ಕೆ.ಗೋ(ಕೇಳಿದರೆ ಗೊತ್ತಿಲ್ಲ) ಎನ್ನುವ ರಸ್ತೆಗಳು...




ಪುಸ್ತಕ ಪ್ರಿಯರಿಗೆ ಸುವರ್ಣಾವಕಾಶ.... ಇನ್ನೆರಡು ದಿನ ಮುಂದಕ್ಕೆ....



ಮರಳಿ ಗೂಡಿ(ಹೊಟೆಲ್)ಗೆ

ಇನ್ನಾವುದೋ ಉತ್ಸವ....ಮತ್ತಾವುದೋ ಊರಿನ ಕಡೆಗೆ ಪಯಣ...





ನುಡಿನಮನಕ್ಕೆ ಜೈ ಎಂದವರು

ಸಮ್ಮೇಳನದ ಮುಕ್ತಾಯದ ನಂತರ 'ನುಡಿನಮನಕ್ಕೆ' ಮೆಚ್ಚುಗೆ ವ್ಯಕ್ತಪಸಿಸಿದ ಗೃಹ ಸಚಿವ ಆರ್.ಅಶೋಕ್, ಕ.ಸಾ.ಪ ಅಧ್ಯಕ್ಷ ನಲ್ಲೂರ್ ಪ್ರಸಾದ್ ಹಾಗೂ ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ನಾರಾಯಣ ಗೌಡ.



ಗಣ್ಯರ ಊಟೋಪಚಾರ ವಿಭಾಗದಲ್ಲಿನ ಅಸ್ಥಿರತೆ




ಸಾಂಸ್ಕೃತಿಕ ಸುಗ್ಗಿ.













ನೀರಜ್ ಪಾಟೀಲ್ ನಾದಸುಧೆ......



ವಿಶ್ವನಾಥನು ತಂದೆಯಾದರೆ, ವಿಶಾಲಾಕ್ಷಿ ತಾಯಿಯಲ್ಲವೇ....?


ನಾನು ಈಗಲೂ ಉಪಯೋಗಿಸುವುದು ಮೈಸೂರ್ ಸ್ಯಾಂಡೆಲ್ ಸೋಪು
ಬ್ರಿಟನ್ ನನ್ನ ಸಾಕುತಾಯಿ, ಭಾರತ ನನ್ನ ಹೆತ್ತ ತಾಯಿ.
ನಾನು ಈಗಲೂ ಅಪ್ಪಟ ಕನ್ನಡಿಗ.

ಬ್ರಿಟನ್ ಮೇಯರ್, ಕನ್ನಡಿಗ....ನೀರಜ್ ಪಾಟೀಲ್

ಸಮಾರೋಪ ಸಮಾರಂಭ ... ಕನ್ನಡ ವಿರೋಧಿಗಳ ವಿರುದ್ಧ ವಾಗ್ಧಾಳಿ


"ಆಜ್ಞೆ ಮಾಡೋ ಐಗಳೆಲ್ಲ ದೇವರೇ ಆಗಲೀ ಎಲ್ಲಾ, ಕನ್ನಡ ಪದಗ ಸುದ್ದಿಗ್ ಬಂದ್ರೆ ಮಾನಾ ಉಳಿಸಾಕಿಲ್ಲಾ." - ನಲ್ಲೂರು ಪ್ರಸಾದ್





ಐಟಿ-ಬಿಟಿ ಕಂಪೆನಿಗಳು ಸಾಹಿತ್ಯ ಸಮ್ಮೇಳನಕ್ಕೆ ಜೊತೆಗೂಡದೇ ಇದ್ದದ್ದು, ಅವರ ದುರಹಂಕಾರವನ್ನು ಎತ್ತಿ ತೋರಿಸುತ್ತದೆ. ಎಲ್ಲಾ ಸಾಫ್ಟ್ ವೇರ್ ಕಂಪೆನಿಗಳಲ್ಲಿ ರಾಷ್ಟ್ರೀಯ ಭಾಷೆ ಕೇ೦ದ್ರೀಕರಣವಾಗಬೇಕು. ಗಡಿಭಾಗದಲ್ಲಿರುವ ಭಾಷೆಯ ಸಮಸ್ಯೆಯನ್ನು ಪರಿಹರಿಸಿದರೆ ಮಾತ್ರ ಕನ್ನಡ ಭಾಷೆಯ ಉಳಿವು ಸಾಧ್ಯ - ಮುಖ್ಯಮಂತ್ರಿ ಚಂದ್ರು




ಜನ ಜಂಗುಳಿಯಿಂದ ತುಂಬಿರುವ ಪುಸ್ತಕ ಮೇಳವನ್ನು ಇನ್ನೂ ಎರದು ದಿನಗಳು ಮುಂದುವರಿಸುವುದು. -ಆರ್.ಅಶೋಕ್



ಸಮ್ಮೇಳನದಲ್ಲಿ ನಡೆದ ಮೆರವಣಿಗೆ ಮೈಸೂರು ದಸರಾವನ್ನು ಮೀರಿಸುವಂತಿತ್ತು- ಪ್ರೊ. ಜಿ.ವೆಂಕಟಸುಬ್ಬಯ್ಯ.



 ಬೆಂಗಳೂರನ್ನು ಪರಕೀಯವಾಗಲು ಬಿಡುವುದಿಲ್ಲ.